Monday, 24 December 2018

ಗಣಿತಗೀತೆ

                                      ಗಣಿತಗೀತೆ
ಇಡಿ ಜಗತ್ತೇ ಗಣಿತಮಯ ; ಈ ಗಣಿತವೇ ಒಂದು ವಿಸ್ಮಯ .
ಈ ವಿಸ್ಮಯವ ಕಲಿಯುತಾ , ಈ ವಿಸ್ಮಯವ ತಿಳಿಯುತಾ
ಮತ್ತೆ ಮತ್ತೆ ನಾವ್  ಕೂಗಿ ಹೇಳುವ  , ಇಡಿ ಜಗತ್ತೇ ಗಣಿತಮಯ ; ಈ ಗಣಿತವೇ ವಿಸ್ಮಯ .     ।।ಪ ।।

ಸೂರ್ಯನ ಕಿರಣವು ಸಾಗಿದೆ ಸರಳ ರೇಖೆಯಲೇ
ಚಂದ್ರನು ಕೂಡ ಸಾಗುವ ಧೀರ್ಘವೃತ್ತದ ಪರಿಧಿಯಲೇ
ಕಾಮನಬಿಲ್ಲು ಕಾಣುತಿದೆ ಭೂಮಿಗೆ ಕಂಸದಂತೆ
ಹಕ್ಕಿಗಳು ಹಾರಾಡಿವೆ ನಿರ್ದೇಶಾಂಕದಂತೆ
ಈ ಭೂಮಿಯೇ ಒಂದು ಗಣ ; ಉಸಿರ ನೀಡುವುದೇ ಇದರ ಗುಣ.                                     

ಸಾವಿನಾಚೆ ಏನಿದೆ  ಬಲ್ಲಿರಾ ನೀವು   ?
ಸಂಖ್ಯೆಗಳ ಕೊನೆಯ ನೀವ್ ಹೇಳುವಿರೇನು ?
ಸಾಗರದ ನೀರನ್ನೆಳೆವೆವು ಕೊಂಚವೂ ನೀರ್ ತಾಗದೆ
ಬೆಟ್ಟದ ಎತ್ತರವನ್ನೇಳುವೆವು ಬೆಟ್ಟವನ್ನೇ ಹತ್ತದೆ
ಅಂಕೆಗಳೊಂದಿಗೆ ಆಟ ಆಡೋಣ ಬನ್ನಿ ;
 ಘಾತಾಂಕಗಳನು ಆತಂಕವಿಲ್ಲದೆ ಕಲಿಯೋಣ ಬನ್ನಿ                                                      

 ಕಷ್ಟಗಳನು ದಾಟಿ ನಾವ್ ಬೆಳೆಯಬೇಕು ಏರಿಕೆ ಕ್ರಮದಲಿ
ಪ್ರೀತಿ ವಿಶ್ವಾಸಕೆ ನಾವೆಂದೂ ತಲೆಬಾಗಬೇಕು ಇಳಿಕೆಯ ಕ್ರಮದಲಿ .
ಪರಿವರ್ತನೀಯ ನಿಯಮ ಪಾಲಿಸಬೇಕು ನಾವೆಂದೂ
ಸಹವರ್ತನೀಯತೆಯಿಂದ ಬದುಕ ನೆಡೆಸುವ ಎಂದೆಂದೂ                                           

ಆಂತರಿಕ ಸಂಪನ್ಮೂಲ ಬೆಳೆವುದು ನಮಗಿದರಿಂದ
ಆತ್ಮಸ್ಥ್ಯರ್ಯದ ಕೌಶಲ ದೊರೆವುದು ನಮಗಿದರಿಂದ .
ಲಾಭ ನಷ್ಟದ ತಾಳೆ ನೋಡುತಾ , ನೋವಿನ ತೆರಿಗೆಯಲಿ ರಿಯಾಯಿತಿಯ ಪಡೆಯುತಾ ...
 ನಗುವನು ಗುಣಿಸಿ , ನೋವ ಭಾಗಿಸಿ , ಸಿಹಿಯನು ಕೂಡಿಸಿ -ಕಹಿಯನು ಕಳೆಯುತಾ ...
ನಾವಾಡುವ .... ಇಡಿ ಜಗತ್ತೇ ಗಣಿತಮಯ ; ಈ ಗಣಿತವೇ ವಿಸ್ಮಯ .
                      ಇಡಿ ಜಗತ್ತೇ ಗಣಿತಮಯ ; ಈ ಗಣಿತವೇ ವಿಸ್ಮಯ .

Monday, 10 December 2018

kshana

ನಿನ್ನ ನೆನಪ ನೆನೆದು ಕಣ್ಣೀರಿಟ್ಟ ಕ್ಷಣವ ಕಂಗಳು ಮರೆಯುವ ಮುನ್ನವೇ ,
ಮರೆಯಾದ 'ನನ್ನ ನಗುವ ನೋಡುವ ಕ್ಷಣಗಳ' ಎಣಿಸಿದರೆ ಅಲ್ಲಿ ಬರೀ ಶೂನ್ಯವೆ .

Sunday, 18 November 2018

BAYAKE

ಬಯಕೆಗಳಿಗೆ ಬಾಯಾರಿಕೆಯಾದಾಗ ಆಸೆಗಳು ಚಿಗುರುತ್ತವೆ ,
ಆಸೆಗಳಿಗೆ ಖುಷಿ ಬೇಕೆನಿಸಿದಾಗ ಕನಸುಗಳು ಚಿಗುರೊಡೆಯುತ್ತವೆ .
ಕನಸುಗಳಿಗೆ ವಿಶ್ರಾಂತಿ ಬೇಕೆಂದಾಗ  ಗುರಿಗಳನ್ನು ಸೃಷ್ಟಿಸುತ್ತವೆ
ಗುರಿಗಳು ಮತ್ತೆ ಬಯಕೆಗಳಾಗಿ ಬೆಳೆಯುತ್ತವೆ , ಬಾಯಾರುತ್ತದೆ , ಚಿಗುರೊಡೆಯುತ್ತವೆ ......... ∞

TARUVEYA ?

ಮನಸಿನ ಮರೆಯಲಿ ಪದಗಳ ಬರೆಯುವೆ 
ಕನಸಿನ ತೆರೆಯಲಿ ನೆನಪನು ಕೊರೆಯುವೆ 
ನೆನಪಿನ ಮಳೆಯಲಿ ನೆನೆಯುವ ಬರುವೆಯ
ಕನಸಿನ ಕೊಡೆಯನು ಜೊತೆಯಲೇ ತರುವೆಯ !

Wednesday, 31 October 2018

Sinchana

ಆ ಮಿಂಚಿನ ಬೆಳಕಲ್ಲಿ , ಗುಡುಗಿನ ಶಬ್ದದಲ್ಲಿ , ಮೈ ಕೊರೆಯುವ ತಣ್ಣನೆಯ ಗಾಳಿಯಲ್ಲಿ , ಮನಸಿಗೆ ಮುದ ಕೊಡುವ ಕೆರೆಯ ದಡದಲ್ಲಿ ಕೈ ನಡುಗಿಸುತ್ತಾ ....... ಬಿಳಿ ಹಾಳೆಯ ಮೇಲೆ ಬರೆದ ಅವಳ ನೆನಪುಗಳ ಪುಟ ತಿರುವಿಸಿ ನೋಡಿದರೆ , ಮತ್ತದೇ ಮಿಂಚಿನ ಬೆಳಕಿನ ವಾತಾವರಣ , ಗುಡುಗಿನ ಸನ್ನಿವೇಶ , ಬೀಸುವ ಗಾಳಿಗೆ ತೂರಿಬಂದು ಮೈ-ಮನಸ್ಸನ್ನು ಒದ್ದೆ ಮಾಡಿದ ಆ ಮಳೆಹನಿಯ ನೆನಪುಗಳು , ಹಾಗೆ ಮನದಲ್ಲಿ ಹಾದು ಹೋಗುವವು ........
ಅದೇಕೋ ಕಾಣೆ ಅವಳದೇ ನೆನಪುಗಳು , ನೆಪಮಾತ್ರಕ್ಕೆ ಮರೆತರೂ ಕೊರೆಯುತ್ತಿವೆ ಮರೆಯಲು ಬರೆಯುತಿರುವ  ಹಾಳೆಗಳನ್ನು ನೋಡಿದರೆ 'ಮತ್ತದೇ ನೆನಪಲ್ಲಿ ನೆನಪಾಗಿ ಉಳಿದು ಕನಸಲ್ಲಿ ಕಾಡುತ್ತಿವೆ ಅವಳ ನೆನಪುಗಳು '.



ಮುಂದುವರೆಯುವುದು

Baruveya ?

ನನ್ನಾತ್ಮಕತೆಗೆ ಮುನ್ನುಡಿಯ ಬರೆದು ಕೊಡುವೆಯ
ನನ್ನಾತ್ಮದ್ವ್ಯತೆಯ ಕನ್ನಡಿಯ ಒರೆಸಿ ಕೊಡುವೆಯ
ಪುಣ್ಯಾತ್ಮನಾಗುವೆನು ಒಮ್ಮೆ ನನ್ನೆಸರ ಕರೆವೆಯ
ಪುಣ್ಯಾತಗಿತ್ತಿ ಸ್ವಲ್ಪ ನಾಚುತಾ ನನ್ನ ಬಳಿ ಬರುವೆಯಾ ?

Monday, 29 October 2018

KANNADA

ನೀನೆ ನೋಡು ಕನ್ನಡ ನಾಡ : ಕನ್ನಡ ನಾಡೆ೦ಬ ಗಂಧದ ಗುಡಿಯ .
ನೀನೆ ನೋಡು ಕನ್ನಡ ನಾಡ : ಕನ್ನಡ ನಾಡಿನ ಸಂಸ್ಕೃತಿ ಸಿರಿಯ .

ಬಣ್ಣದ ಬಾವುಟ ತೋರಿದೆ ಭಾವುಕತೆ
ಚಿನ್ನದ ನುಡಿಯಿದು ಸಾರಿದೆ ಭಾವ್ಯಕ್ಯತೆ


ಧರ್ಮದ ಭೇದ ,ಮಾಡಿಲ್ಲ ಎಂದೂ , ಹಿಂದೂ ಮುಸ್ಲಿಂ ಕ್ರಿಸ್ತ  ಎಂದು .
ಕರ್ಮವ ನಾವು ಮರೆಯಲ್ಲ ಎಂದೂ , ಅನ್ನ ನೀಡುವ ರೈತರೇ ನಮಗಾಧಾರ ಎಂದೆಂದೂ .

ಕೇಳು ನೀನು ಕನ್ನಡ ನುಡಿಯ : ಚಿನ್ನದ ನಾಡಿನ ರತ್ನನ ಪದವ .
ಆಡು ನೀನು ಕನ್ನಡ ಪದವ : ಕಾಫಿ ನಾಡಿನ ಗುಂಡಪ್ಪನ ಕಗ್ಗವ .

ಕಾವೇರಿ ಹರಿವಳು ಈ ನಾಡಲ್ಲಿ ಚಾಮುಂಡಿ ತಾಯಿಯ ಮಡಿಲಲ್ಲಿ ,
ಶರಾವತಿ ನಲಿವಳು ಜೋಗದ ಹೆಸರಲಿ ಮಲೆನಾಡಿನ ಆ ನೆಲದಲ್ಲಿ .

ನೆನಪು ಕಾಡುತಿಹುದು ಸಂಗೊಳ್ಳಿ ರಾಯಣ್ಣನನು
ಕನಸು ಬೇಡುತಿಹುದು ವಿಜಯನಗರ ಸಾಮ್ರಾಜ್ಯವನು
ಮನಸು ನೆನೆಯುತಿಹುದು ಆ ವೀರವನಿತೆ ಓಬವ್ವನನು

ದೇಶಕೆ ಭಾರತ ರತ್ನಗಳ ಕೊಟ್ಟಂತಹ ನಾಡಿದು
ದೇಶಕ್ಕಾಗೋರಾಡುವ ಸೈನಿಕರ ತವರೂರಿದು
ಕರುಣೆ -ಪ್ರೀತಿ -ಮಮತೆ ಇಲ್ಲೆಂದಿಗೂ ಬರಿದಾಗದು

ಬಣ್ಣದ ಬಾವುಟ ತೋರಿದೆ ಭಾವುಕತೆ
ಚಿನ್ನದ ನುಡಿಯಿದು ಸಾರಿದೆ ಭಾವ್ಯಕ್ಯತೆ

Monday, 15 October 2018

Waste paper

ಕಣ್ಮುಚ್ಚಿಕೊಂಡು ನಾ ಬರೆದೆ ಒಂದು ಕಲ್ಪನಾ ಲೋಕದ ಚಿತ್ರ 
ಕಣ್ಬಿಟ್ಟು ನೋಡಿದ ಮೇಲೆಯೇ ಗೊತ್ತಾಗಿದ್ದು ಆ ಪೇಪರ್  ವೇಸ್ಟ್  ಆಗಿದೆ ಅಂತ

Tuesday, 25 September 2018

Aarambha

ಚಿಹ್ನೆಗಳಿಗಿರುವ ಭಾವನೆಯ , ಅಕ್ಷರಗಳ ಕಲ್ಪನೆಯೊಂದಿಗೆ ಬೆರೆಸಲು .... 
ಪದಗಳ ನೆನಪುಗಳು , ಪುಸ್ತಕದ ಕನಸಂತೆ ಚಿಗುರೊಡೆಯಲಾರಂಭಿಸಿವೆ .

Thursday, 20 September 2018

parisara

ನಸುನಗುತಾ ಬೀಸಿದೆ ಗಾಳಿಯು
ಪಿಸುಗುಡುತಾ ಹಾಡಿದೆ ಹಕ್ಕಿಯು
ಪರಿಚಯದ ಪರಿವೆಯೇ ಇಲ್ಲದೆ ನಸುನಗುವ ನನ್ನೀ ಮನಕೆ
ಪರಿಸರದ ಅರಿವೆಯ ಪಿಸುದನಿ ಕೇಳುವಾಸೆ ಮೂಡಿದೆ ಏತಕೆ ?

Saturday, 18 August 2018

pratidwaniya bimba

ಮುಂಗೋಪವ  ಮುಂಗುರುಳಂತೆ ಸರಿಸು
ಮುಗುಳುನಗೆಯ ಮುಂಗಾರುಮಳೆಯಂತೆ ಸುರಿಸು
ನನ್ನಾಸೆಯ ಧ್ವನಿಗೆ ಪ್ರತಿಧ್ವನಿಯಾಗಿ ನನ್ನ ಮೈ ಮರೆಸು
ನಿನ್ನ ಬಿಂಬದ  ಪ್ರತಿಬಿಂಬವಾಗಿ ನನ್ನನ್ನೇ  ಮೆರೆಸು .

 

Kaala

ಕಾಲ ಓಡುತ್ತಲಿದೆ, ಕಾಲವನು ಕಾಲಿಗೆ ಕಟ್ಟಿಕೊಂಡು ಸಾಗುತ್ತಲಿದೆ, ಎಲ್ಲಿಗೆ ?

Monday, 30 July 2018

krushi

 ತುಂತುರು ಹನಿಗಳ ಕೈಗಳು ಹೃದಯವ ಕಸಿ ಮಾಡುತಿವೆ :
ಬಳುಕುವ ಬಳ್ಳಿಯ ಮಾತುಗಳು  ಶ್ರವಣವ ವಸಿ ಕಾಡುತಿವೆ . 
ಹೇಳದೆ ಕೇಳದೆ ಹುಸಿನಗುವಿನ ಕೃಷಿ ಸಾಗುತಿದೆ 
ಮನದ  ಭುವಿಗೆ ನೆನಪಿನ ಹನಿನೀರಾವರಿ ಖುಷಿ ನೀಡುತಿದೆ .

Wednesday, 6 June 2018

Parisara Geete

ಮರಗಳ ಉಳಿಸೋಣ   ಗಿಡಗಳ ಬೆಳೆಸೋಣ
ಮರಗಳ ಉಳಿಸೋಣ ಇನ್ನಾದರೂ  ಗಿಡಗಳ ಬೆಳೆಸೋಣ         ;; ಪ ;;
ಕಾಡೇ ನಾಡಿನ ಉಸಿರು ಮರೆಯದಿರಿ
ಪರಿಸರವನು ನೀವೆಂದೂ ಕಡೆಗಣಿಸದಿರಿ

ನಮಗೆಲ್ಲಾ ಆಹಾರ ಈ ಭೂಮಿಯಿಂದಲೇ
ಈ ಭುವಿಗೆ ಆಧಾರ ಮಳೆಯೊಂದೇ ಅಲ್ಲವೇ
ಆ ಮಳೆಗೆ ನೆರೆಹೊರೆಯೇ ಮರಗಿಡಗಳೇ ಅಲ್ಲವೇ
                 ಮರಗಳಿಲ್ಲದೆ ಮಳೆಯಿಲ್ಲ ; ಮರಗಳಿಲ್ಲದೆ ಭುವಿಯಿಲ್ಲ
                  ಮರಗಳಿಲ್ಲದೆ ನಾವಿಲ್ಲ ; ಮರಗಳಿಲ್ಲದೆ ಬದುಕಿಲ್ಲ.

ನಾವೆಲ್ಲಾ ಬದುಕಿಹೆವು ಈ ಗಾಳಿಯಿಂದಲೇ
ಈ ಗಾಳಿಗೆ ಆಧಾರ ಹಸಿರೆಲೆಗಳೇ ಅಲ್ಲವೇ
ಆ ಹಸಿರಿಗೆ , ನಮ್ಮ ಉಸಿರಿಗೆ ಆಧಾರ ಮರಗಿಡಗಳೇ ಅಲ್ಲವೇ
                  ಮರಗಳಿಲ್ಲದೆ ಉಸಿರಿಲ್ಲ ; ಮರಗಳಿಲ್ಲದೆ ಹಸಿರಿಲ್ಲ
                    ಮರಗಳಿಲ್ಲದೆ ನಾವಿಲ್ಲ ; ಮರಗಳಿಲ್ಲದೆ ಬದುಕಿಲ್ಲ.
ಕಾಡೇ ನಾಡಿನ ಉಸಿರು ಮರೆಯದಿರಿ
ಪರಿಸರವನು ನೀವೆಂದೂ ಕಡೆಗಣಿಸದಿರಿ
ಮರಗಳ ಉಳಿಸೋಣ ನಾವೆಲ್ಲರೂ ಗಿಡಗಳ ಬೆಳೆಸೋಣ       

                  

Friday, 1 June 2018

MOUNA

ಮೌನ ಒಂದು ಸುಂದರವಾದ ಭಾವನೆ 
ಮೌನ ಒಂದು ಸುಮಧುರವಾದ ಸೂಚನೆ 
ಮೌನ ಒಂದು ಸುಂದರವಾದ  ಕಲ್ಪನೆ 
ಮೌನ ಒಂದು ಸುಮಧುರವಾದ ವೇದನೆ

Mouna ?

ಎಲ್ಲಕ್ಕೂ ಪ್ರಶ್ನೆಯೇ ಮೌನ  , ಎಲ್ಲದಕ್ಕೂ ಉತ್ತರವೇ ಮೌನ  , ಎಲ್ಲರನ್ನು ಕ್ಷಮಿಸುವುದು ಮೌನ  ,ಎಲ್ಲವನ್ನು ತ್ಯಜಿಸುವುದು ಮೌನ  ,ಎಲ್ಲರ ಗೆಲ್ಲುವುದು ಮೌನ  , ತನ್ನೊಳಗೇ ಸೋಲುವುದು ಮೌನ  ,ಎಲ್ಲವ ಮರೆಯುವುದೇ ಮೌನ  , ಎಲ್ಲವ ನೆನೆವುದೇ ಮೌನ  ,ಎಲ್ಲರಲ್ಲೂ ತುಂಬಿದೆ ಮೌನ  , ಎಲ್ಲರನು ನಂಬುವುದು ಮೌನ  , ಏನಾದರೂ ಪಡೆದಾಗಲೂ ಮೌನ  , ಏನಾದರೂ ಕಳೆದುಕೊಂಡಾಗಲು ಮೌನ  , ಮೌನದ ಪ್ರಶ್ನೆಗೆ ಉತ್ತರವೇ ಮೌನ , ಕನಸಿನ ಕನವರಿಕೆಯ ಪ್ರಶ್ನೆಯೇ ಮೌನ  ,ಪ್ರೀತಿಯ ನೋವು ಯಾವಾಗಲು ಮೌನ  , ಪ್ರೇಮದ ಗೆಲುವೂ ಮೌನ , ಜೀವನದ ಕ್ಷಣಗಳು ಮೌನ   , ಅರಳಿದ ಹೂ ಮೌನ , ಹರಿವ ನೀರು ಮೌನ , ಬೀಸುವ ಗಾಳಿ ಮೌನ  , ಸೂಸುವ ಪರಿಮಳ  ಕೂಡ ಮೌನ  ,ನಿಂತ ಮರಗಿಡಗಳು ಮೌನ , ಕುಂತ ಬೆಟ್ಟ ಗುಡ್ಡಗಳೂ ಮೌನ  , ಹೀಗಿರುವಾಗ ಪ್ರಕೃತಿಯ ಮಾತನು ಬಲ್ಲವರಾರು ? ಮನುಷ್ಯನ ಮೌನವ  ತಿಳಿದವರಾರು ? 
ಮೌನ  ಒಂದು ಸುಂದರವಾದ ಭಾವನೆ. 
ಮೌನ  ಒಂದು ಸುಮಧುರವಾದ ಸೂಚನೆ . 
ಮಾತಿಗೆ ಬೆಲೆ ಕೊಡೋಣ  , ಮೌನಕೂ  ಬೆಲೆ ನೀಡೋಣ !

Pareekshe

ಜೀವನದ ಪರೀಕ್ಷೆಯಲಿ ನಿರೀಕ್ಷೆಯದೇ ಕಾರುಬಾರು
ಪ್ರೀತಿಯ ಪರೀಕ್ಷೆಯಲಿ ಸಿಗದು ಎಂದೂ ನೂರಕ್ಕೆ ನೂರು
ಪ್ರೇಮದ  ಸಮೀಕ್ಷೆಯ ಹಾದಿಯಲಿ ನೆನಪುಗಳದೇ ಮಾತು ಜೋರು
ಪ್ರೀತಿಯ ಪರಿಸರದ ಪರಿವಾರದಲಿ ಸಿಗುವುದೇ ಒಂದು ಸೂರು

Sunday, 20 May 2018

ಜೀವನ ?

''ಸಣ್ಣ ಸಣ್ಣ  ಕ್ಷಣಗಳನ್ನು, ದೊಡ್ಡ ದೊಡ್ಡ ಕಣಗಳಾಗಿ ಪರಿವರ್ತಿಸಿ, ನೆಮ್ಮದಿಯಿಂದ  ನಗುವುದೇ ನಿಜವಾದ ಜೀವನ ''.

Saturday, 19 May 2018

ಬೆರಳೆಣಿಕೆ

ಕನಸುಗಳು ಸಾವಿರಾರು , ಆಸೆಗಳು ನೂರಾರು  , ನನಸಾಗುವ ಆಸೆಗಳು ಕೇವಲ ಬೆರಳೆಣಿಕೆಯಷ್ಟು !

ಮುಕ್ತಿ

ಕನಸುಗಳಿಗೆ ಮುಕ್ತಿ ಕೊಟ್ಟ ದಿನ ಮನುಷ್ಯ ಜೀವಂತ ಶವ !

Friday, 18 May 2018

ಮಾತಾಡೆ

ನಿನ್ನ ಕಣ್ಣ ಕನ್ನಡಕದಲಿ ಒಮ್ಮೆ ನನ್ನ ನೋಡೆ 
ನನ್ನ ಭಾಷೆ ಕನ್ನಡದಲಿ ನನ್ನ ಜೊತೆ ಮಾತಾಡೆ 
ನೋಡಿಯೂ ಮಾತನಾಡದೆ ನನ್ನನೇ ಕಾಡೆ 
ನನ್ನೆದೆಯ ಗೀತೆಯ ನಿನ್ನ ರಾಗದಲಿ  ಹಾಡೆ

ಸ್ವರ

ನೆನೆದರಲ್ಲವೇ ನೆನಪಾಗುವುದು
ಮರೆತರವೇ ಮರೆಯಾಗುವುದು
ನೆನೆದು ಮರೆಯಾದ : ಮರೆತು ನೆನಪಾದ
ಸ್ವರವೇ ನೀನಲ್ಲವೇ... 

Friday, 11 May 2018

ಸರಿಯಾದ ತಪ್ಪು !

ತಪ್ಪು ಎಂಬುದೇ ತಪ್ಪು 
ಸರಿ ಎಂಬುದೂ ತಪ್ಪು 
ತಪ್ಪು , ಸರಿಯಾದಾಗ 
ಸರಿಯೆಲ್ಲವೂ ತಪ್ಪು 
ಸರಿ , ತಪ್ಪಾದಾಗ 
ತಪ್ಪೆಲ್ಲವಾ ನೀ ಒಪ್ಪು

ಮತದಾರ

ಆಶ್ವಾಸನೆಗಳ ನಂಬಿ ಬದುಕು ನೂಕುತ್ತಿರುವ 
ಶ್ವಾಸ ಬಿಗಿಹಿಡಿದು ನರಳಿ ಬದುಕುತ್ತಿರುವ 
ನಮ್ಮ ಮತದಾರ : ಮತಗಟ್ಟೆಯ ಸರದಾರ . 

ಬರಿಹೊಟ್ಟೆಯಲಿ ಪರಿಹಾರ ಬಯಸಿ ಕೂತಿರುವ 
ಬರಿಮೈಯಲ್ಲಿ ಮಳೆ ಛಳಿ ಎನ್ನದೆ ಬಾಳುತ್ತಿರುವ 
ನಮ್ಮ ಮತದಾರ : ಮತಗಟ್ಟೆಯ ಸರದಾರ .

ಮತದಾನ

ಪ್ರತಿಫಲ ಬಯಸದೆ ನೀಡುವುದೇ ದಾನ 
ಪ್ರತಿಫಲ ಬಯಸಿ ಮಾಡುವುದೇ ಮತದಾನ 
ನೀಡಿದ ದಾನಕ್ಕೆ ಮನಃಶಾಂತಿಯೇ ಪ್ರತಿಫಲ 
ಮಾಡಿದ ಮತದಾನಕ್ಕೆ ಪ್ರಾಯಶ್ಚಿತ್ತವು ಪ್ರತಿಸಲ

ಅನುಭಾವ

ಪ್ರತಿದಿನವೂ ಅನುಭವ 
ಪ್ರತಿಕ್ಷಣವೂ ಅನುಭಾವ 
ಅನುಭವ ಮನಸಿಗೆ ಸಿಲುಕದ್ದು 
ಅನುಭಾವ ಕನಸಿಗೂ ನೀಲುಕದ್ದು

ವಿ. ಸೂ : ಅನುಭಾವ = ಎಲ್ಲವನ್ನೂ ಮೀರಿದ್ದು

Saturday, 5 May 2018

ಮರೆತುಬಿಡು ನನ್ನ ....

ಮರೆತುಬಿಡು ನನ್ನ .... 
        ಅಲೆಯು ದಡವ ಮರೆಯುವಂತೆ 
          ಕಣ್ಣು ರೆಪ್ಪೆಯ ಮರೆತಿರುವಂತೆ 
            ಶ್ವಾಸ ಉಸಿರ ಮರೆಯುವಂತೆ
                ದೇಹ ನೆರಳ ಮರೆತಿರುವಂತೆ 
                    ಮರೆತುಬಿಡು ನನ್ನ ಮರೆತುಬಿಡು

ಸಮಾರಂಭ

ದೀಪ ಬೆಳಗುತಿದೆ ವೇದಿಕೆಯ ಮೇಲೆ,
ದೀಪದ ಸುತ್ತ ಸುತ್ತಿದೆ ಹೂ ಮಾಲೆ. 
ಧ್ವನಿಯು ಮೊಳಗಿದೆ ಭಾಷಣದ ರೀತಿಯಲಿ ,
ನಮ್ಮ ಧನಿಯು ಸೊರಗಿದೆ ಶಿಕ್ಷಕರ ಭೀತಿಯಲಿ .

Sunday, 29 April 2018

ಕನಸಮನಸು

ತಳಮಳದಲಿ ತೆವಳುತಿದೆ ಮನಸು ,
ಕನವರಿಕೆಯಲಿ ನರಳುತಿದೆ ಕನಸು . 
ಕನಸ ಕನವರಿಕೆ ಕೇಳಲು ಹಾತೊರೆಯುತಿದೆ ಮನಸು, 
ಮನಸ ತಳಮಳ ಶಮನಗೊಳಿಸಲು ಶ್ರಮಿಸುತಿದೆ ಕನಸು .

ತಳಮಳ

ತಳಪಾಯವಿಲ್ಲದ ಮನಸಿನ ಆಸೆ ಕೇಳಿ ,... 
ನೆರಳೂ ಕೂಡ ನೆರಳನುಡುಕುತಿರುವಾಗ ; ಬೆವರೂ ಕೂಡ ಬೆವರುತಿದೆಯಲ್ಲ .
ಕಡಿವಾಣವಿಲ್ಲದ ಮನಸಿನ ಭಾಷೆ ಕೇಳಿ ,... 
ಮಾತು ಮೌನವಾಗಿರುವಾಗ  ; ಮೌನ ಮಾತ ಬಯಸುತಿದೆಯಲ್ಲ . 

Saturday, 28 April 2018

ಅಗಣಿತ

                       ಅಗಣಿತ
ವರ್ಷಗಳನೆಣಿಸಬೇಡ, ಕನಸ ಗುಣಿಸುವುದ ಮರೆಯಬೇಡ . 
ನೆನಪುಗಳ ಕಳೆಯಬೇಡ , ನೋವ ಭಾಗಿಸುವುದ ಮರೆಯಬೇಡ . 
ನೆನ್ನೆ ನಾಳೆಗಳ ಸಂತೆಯಲಿ , ಪ್ರತಿಕ್ಷಣವ ಕೊಳ್ಳಲು ಮರೆಯಬೇಡ . 

black and white

                ಕಪ್ಪು - ಬಿಳಿಪು
 ಬ್ಲ್ಯಾಕ್ ಅಂಡ್ ವೈಟ್ ಕಾಲದಲ್ಲಿ ಪ್ರಪಂಚ ಕಲರ್ ಫುಲ್  ಆಗಿತ್ತು , ಕಲರ್ ಫುಲ್ ಕಾಲದಲ್ಲಿ ಪ್ರಪಂಚದ ತುಂಬ ಬರೀ ಬ್ಲ್ಯಾಕ್ (carbon) ಅಂಡ್ ವೈಟ್ (cement).

PREMA

                 ಪ್ರೇಮ
ಸೀರೆಯುಟ್ಟು ಬಳೆಯ ತೊಟ್ಟು ನೀ ನಗುವಾಗ ,
ತಾಳ್ಮೆಗೆಟ್ಟು ಉಸಿರುಗಟ್ಟಿತು ನನಗಾಗ . 
ಹಣೆಯ ಬೊಟ್ಟು ನಿನ್ನ ಕಣ್ಗಳ ಮಧ್ಯ ಕುಳಿತಿರುವಾಗ ,
ಆ ಬೊಟ್ಟ ಮೇಲೆ ಅಸೂಯೆ ಹುಟ್ಟಿತು ನನಗೀಗ . 
ತುಟಿಯ ನಡುವೆ ಅರಳೊ ನಗುವು ಕೆನ್ನೆಗಂತೂ ಕಾಣಿಸದು,
ನಮ್ಮ ನಡುವೆ ಅರಳೋ ಪ್ರೇಮವು ಕನ್ಯೆ ನಿನಗೆ ಕಾಣಿಸದೆ ?
 

ಮರೆತೋಯ್ತ ?


ಮರೆವು ಅನ್ನೋದೇ ನೆನಪಿಲ್ಲ ನನಗೆ 
ನೆನಪು ಅನ್ನೋದು ಮರೆತೋಯ್ತ  ನಿನಗೆ .

Thursday, 26 April 2018

sereyaade

         ಸೆರೆಯಾದೆ

ಸರಿಯಾಗಿ ಹೇಳು ಬೇಗನೆ ,
ಸರಿಯಿಲ್ಲ ಹಾಳು ವೇದನೆ,
ಮರೆಯಾಗಿ ನೋಡು ನನ್ನನೇ ,
ಸೆರೆಯಾದೆ ನಾನು ನಿನ್ನಲೇ. 

Sunday, 15 April 2018

SARALA

          ವಿ(ಸ)ರಳ
ಮೊಗವು ನಗುವಿನ ಹಣತೆ ,
ಮನಸೆಳೆವ  ಸುಂದರ ಸರಳತೆ ,
ಇನ್ನೆಲ್ಲೂ ಕಾಣದ ಮುಗ್ದ ತನ್ಮಯತೆ ,
ನಿನ್ನಲ್ಲಿ  ಕಂಡು ಮಾತು ಮರೆತೆ .

NADUVE

                       ನಡುವೆ 
 ಬೇಕು-ಬೇಡಗಳ ನಡುವೆ ಮೂಕವಾಗಿದೆ ಕನಸು ,
ಸರಿ-ತಪ್ಪುಗಳ ನಡುವೆ ಸಿಲುಕಿದೆ ಮನಸು ,
ಬೇಕು-ಬೇಡ ಎಂದೆಣಿಸದೆ ನನ್ನ ಮನ್ನಿಸು ,
ಸರಿ-ತಪ್ಪುಗಳ ನಡುವೆಯೂ ನನ್ನೇ ಪ್ರೀತಿಸು . 

Friday, 13 April 2018

TAALMEYA PRASHNE

                                   ತಾಳ್ಮೆಯ ಪ್ರಶ್ನೆ !
ತಾಳ್ಮೆಯನ್ನೂ ತಾಳ್ಮೆಯಿಂದ ನೋಡುವ ನಿನ್ನ ತಾಳ್ಮೆಯ ಪರಿಗೆ ಮನ ಸೋತಿರಲು,
ಪ್ರಶ್ನೆಗೂ ಪ್ರಶ್ನೆಯನು ಕೇಳುವ ನಿನ್ನ ಪ್ರಶ್ನೆಯ ಪರಿಯ ನಾ ಪ್ರಶ್ನಿಸಲೆ ?
ನಿನ್ನಾ ತಾಳ್ಮೆಗೆ ನಾ ಸೋತು ತಾಳ್ಮೆಯಲಿ ನಿನ್ನ ತಾಳ್ಮೆಯ ಬಯಸುತಾ ಕೂತಿರಲು,
ಪ್ರತಿಮಾತೂ ಉತ್ತರವೆ ತಾನೆ ನೀ ಪ್ರಶ್ನೆಯಾಗಿರುವಾಗ ನನ್ನಲೆ .

Thursday, 12 April 2018

MODAVE

                                         ಮೊಡವೆ 
ಮುಂಗುರುಳು ನಿನ್ನ ಮೊಡವೆ ಮರೆಮಾಚುತಿದೆ ,
ತಂಗಾಳಿ ನಿನ್ನ ಮೊಡವೆ ನೋಡಲು ಕಾದಿದೆ . 
ತಂಗಾಳಿಗೆ ಮುಂಗುರುಳ ಮೇಲೆ ಕೋಪ ,
ಮುಂಗುರುಳಿಗೆ ತಂಗಾಳಿ ಮೇಲೆ ತಾಪ ,
ನನಗೆ ಅವೆರಡರ ಮೇಲೂ ಆರೋಪ . . . . . . . !

Sunday, 8 April 2018

SULLU

                ಸುಳ್ಳು 
ನಾನೇಳಿದ  ಸುಳ್ಳುಗಳು ಲೆಕ್ಕಕ್ಕೇ ಸಿಗುತ್ತಿಲ್ಲ ,
ನೀನೇಳದ  ಸುಳ್ಳುಗಳ ಕಲ್ಪನೆಯೂ ನನಗಿಲ್ಲ. 
ಅಂತ್ಯ ಹೇಳುವಾಸೆ ನನ್ನ ಕಲ್ಪನೆಯ ಸುಳ್ಳುಗಳಿಗೆ ,
ದಯಮಾಡಿ ಕ್ಷಮೆನೀಡು ಏನೂ ಅರಿಯದ ನನ್ನ ಕಣ್ಣುಗಳಿಗೆ .

ARTICLE

                                        ಲೇಖನ 
ನಿಮಗೊಂದ್  ವಿಷ್ಯ ಹೇಳ್ಬೇಕು , ಕೇಳುತ್ತೀರಾ or ಓದುತ್ತೀರಾ ? ನೀವ್  ಓದೋದ್ ನೇ ನಾನ್ ಹೇಲೋಥರ ಕೇಳಿಸ್ಕೊಂಡು imagine ಮಾಡ್ಕೊಂಡು ಓದುದ್ದ್ರೆ [for example: ಹಳೆ ಫಿಲಂ ನಲ್  ಲೆಟರ್ ಓದೋ ಹಾಗೆ] ನೀವ್  ಓದಿದ್ರು ನನ್  ಧನಿಲೆ ಕೇಳಿಸ್ತದಂತೆ !, ನನಗೂ  ತುಂಬಾ ಸಲ ಅಲ್ಲಲ್ಲ ಪ್ರತೀ ಸಲನು ಅನುಭವ ಆಗ್ತಾನೆ ಇದೆ , ಉದಾಹರಣೆಗೆ ನಿಮ್ ಫ್ರೆಂಡ್ಸ್ ವಾಟ್ಸಾಪ್ ನಲ್  ಮೆಸೇಜ್  ಮಾಡಿದರೆ , ಆ ವ್ಯಕ್ತಿಗೆ ತಕ್ಕಂತೆ ನಾವ್  ಮೆಸೇಜ್ ಓದೋ ರೀತಿನೇ ಬದಲಾಗುತ್ತಲ್ವಾ ? ಅವ್ರೆ ಜೊತೆಲ್  ಮಾತಾಡಿದ ಹಾಗೆ ಅನ್ಸುತ್ತೆ ತಾನೇ , ಅದೇ ನಮ್  ಮೈಂಡ್ ಗೆ ಇರೋ ತಾಕತ್ತು . 
ಒಂದ್  ವಿಷ್ಯ ಹೇಳ್ತೇನೆ ಅಂತ start ಮಾಡಿ ಏನೇನೋ ಹೇಳ್ತಾ ಅವ್ನೆ ಅಂತ ಬೈಕೋಬೇಡಿ , ಹೇಳ್ತೇನೆ , ಹೇಳುತೀನಿ ,... ಓದಿ ಅಥವಾ ಕೇಳಿ . 
B.Sc Second year ಅನ್ಸುತ್ತೆ , ನಮ್  college ನಲ್ಲಿ ವರ್ಷಕ್ಕೊಂದು ವಾರ್ಷಿಕ ಸಂಚಿಕೆ ಬರೋದು , ಅದ್ರಲ್ಲಿ ಸ್ಟೂಡೆಂಟ್ಸ್ ಬರ್ದಿರೋ ಸ್ವಂತ ಕತೆ , ಕವನಗಳು , ಒಗಟುಗಳು , ಲೆಕನಿಗಳು ಇನ್ನೂ  ಏನೇನೋ ಬರೆದು ಕೊಡೋರು , ಅದ್ರಲ್  ಚೆನಾಗಿರೋಧ್ನ select ಮಾಡಿ ಆ ವಾರ್ಷಿಕ ಸಂಚಿಕೆಯಲ್ಲಿ publish ಮಾಡೋರು . ನಾನ್  ಕೊಟ್ಟಿದ್ದು ಬರುತ್ತೋ ಇಲ್ವೋ ಅಂತ ಕಾಯೋದೇ ಒಂದ್  ಖುಷಿ . 
ಆ ವರ್ಷ ನಾನ್  ಬರ್ದಿರೋದು ಕೂಡ ಸಂಚಿಕೆಯಲ್ಲಿ ಬಂದಿತ್ತು , yes ನಿಮ್ guess correct ಆಗಿದೆ ಆ ಕಥೆನೇ ನಾನ್  ಹೇಳ್ಬೇಕು ಅಂದಿದ್ದು , ಮೊನ್ನೆ ಮೊನ್ನೆ ಮನೆ clean ಮಾಡ್ಬೇಕಾದ್ರೆ ಆ ಬುಕ್ ಸಿಕ್ತು , ಇನ್ನೊಂದ್ ಸಲ ಓದಿದೆ 'ಆವಾಗ್ಲೇ ಆ ರೀತಿ ಬರ್ದಿದ್ನ ' ಅಂತ ಏನೋ ಒಂಥರಾ ಖುಷಿ ಆಯ್ತು .  ಇದನ್ನು ಇನ್ನೊಂದಷ್ಟು ಜನಕ್ಕೆ ಹೇಳ್ಬೇಕು ಅನ್ನಿಸ್ತು , ಫೋಟೋ ತೆಗೆದು ಸ್ಟೇಟಸ್ ಗೆ ಹಾಕೋಣ ಅನ್ನಿಸ್ತು 'ಸ್ಟೇಟಸ್ ಯಾರ್ ನೋಡತಾರೆ , ನೋಡುದ್ರು ಓದಲ್ಲ ' ಅಂತ ಮತ್ತೆ ಅನ್ನಿಸ್ತು, face book ಗ್ಗೆ ಅಪ್ಲೋಡ್ ಮಾಡೋಣ ಅಂತ ಅನ್ಕೊಂಡೆ ಆದ್ರೆ ಮಾಡ್ಲಿಲ್ಲ , ಕೊನೆಗೆ ಇವಾಗ್ ತಾನೇ create ಮಾಡಿರೋ ಹೊಸ blog ಇದೆಯಲ್ಲ ಅದ್ರಲ್ಲೇ ಹಾಕೋಣ ಅಂತ decision ತಗೊಂಡೆ . "ಆದ್ರೂ ನೀನ್  ಏನ್  ಬರ್ದಿದೆಯಾ ಅಂತ ಹೇಳ್ ಲೇ ಇಲ್ಲ " ಅಂತೀರಾ , ನಾನ್  ಬರ್ದಿದ್ದು ಒಂದ್ ಸಣ್ಣ article, ಆರ್ಟಿಕಲ್ ಅನ್ನೋ ಪದಕ್ಕೆ ಸರಿಯಾಗ್ ಕನ್ನಡ word ಯಾವ್ದು ಅಂತ ಗೊತ್ತಾಗ್ದೇ ಅಟ್ಟದ ಮೇಲಿರೋ dictionary ಹುಡುಕೋಕೆ ಹೋದೆ ,"dictionary ಯಾಕೆ mobile ನಲೆ ನೋಡ್ಬಹುದಲ್ವಾ " ಅಂತ ಹೇಳಿದ್ರಿ ಅಲ್ವ ! ನಂಗ್ ಕೇಳಿಸ್ತು ಬಿಡಿ . thank you for your suggestion . ಕೊನೆಗ್  ಮೊಬೈಲ್ ನಲ್ಲೆ  article word ಗೆ ಮೀನಿಂಗ್ search ಮಾಡ್ದೆ, ಆರ್ಟಿಕಲ್ ಅಂದ್ರೆ

 ಬರಹ ಅಂತೆ , ಮೊದ್ಲೇ ಗೊತ್ತಿತ್ತು , ಕೆಲವೊಂದ್ ಸಲ ಹಾಗೆ ನಮಗ್ ಗೊತ್ತಿರೋದ್ರು ಮೇಲೆ ನಮಗೆ ನಂಬಿಕೆ ಇರಲ್ಲ . 
ಕೊನೆಗ್  ಎಲ್ಲಾ ready ಮಾಡ್ಕೊಂಡು ,laptopಗೆ  ಮೊಬೈಲ್ hot spot connect ಮಾಡ್ಕೊಂಡು ,G -mail  account ಗೆ login ಆಗಿ , blogger ಗ್  ಹೋಗಿ , new post ಮೇಲೆ ಕ್ಲಿಕ್  ಮಾಡಿ ಇನ್ನೇನ್  type ಮಾಡೋಕ್ start ಮಾಡಬೇಕು . . . . . . ಅಷ್ಟ್ರಲ್ಲಿ , ಒಬ್ಬ friend ,ಗೆಳೆಯ , ಸ್ನೇಹಿತ ಬಂದು " ಲೋ ೪:೩೦ show ಗೆ ಫಿಲಂ ಗೆ ಹೋಗೋಣ ಬಾ ಆಗ್ಲೇ ೪:೧೫ ಆಯ್ತು " ಅಂತ ಹೇಳಿ ಕರ್ಕೊಂಡ್ ಹೋಗೆ ಬಿಟ್ಟ . . 
ನಿಮಗೆ ಆ article ಹೇಳೇ ಹೇಳ್ತಿನಿ ಅಂತ ಮಾತೇನ್  ಕೊಟ್ಟಿರಲಿಲ್ಲ ಅಲ್ವ ! , ಪ್ರತೀ class ಕೊನೆಗೆ teacher ಹೇಳೋ common dialogue ಯಾವ್ದು ಗೊತ್ತು ತಾನೇ "the remaining will be continue on the next class ". ಹಾಗೆಯೇ 'ನಾನು ನನ್ನ ಆ ಲೇಖನ ದ  ಬಗ್ಗೆ next post ನಲ್  ಹೇಳ್ತೀನಿ '.

ADEN GOTTA ?

                  ಅದೇನಂದ್ರೆ. . . !
ಕೂಗಳತೆಯ ದೂರ ನಿಲ್ಲು, ನಾ ಕೂಗಿ ಹೇಳಬೇಕು 
ಕೇಳಿಸುತ್ತಿಲ್ಲ ಎಂದು ಹೇಳಿ , ನೀ ಮತ್ತೆ ಕೇಳಬೇಕು 
ಕಣ್ಣಳತೆಯ ದೂರ ನಿಲ್ಲು, ನಾ ನಿನ್ನ ನೋಡಬೇಕು 
ಸಮಯವಿಲ್ಲ ಎಂದು ಹೇಳಿ , ನೀ  ನನ್ನೇ ಕಾಡಬೇಕು
ಕೈಸನ್ನೆ ಮಾಡಿ ನೀ ನನ್ನ ಕರೆಯಬೇಕು 
ಕಣ್ಸನ್ನೆ ಮಾಡಿ ನೀ  ನನ್ನನ್ನೇ ಮರೆಸಬೇಕು . . .

JOTHEYALI

              ಜೊತೆಯಲಿ 
ಮನಸಿನ ಮಾತು ಹೊರಗೆ ಕೇಳಿಸದು ,
ಕನಸಿನ ಮೌನ ಯಾರಿಗೂ ಕಾಣಿಸದು;
ನಿನ್ನ ಮನಸು ನನ್ನ ಬಯಸಲಿ ,
ನಿನ್ನ ಕನಸು ನನ್ನ ಪ್ರೀತಿಸಲಿ ;
ಕೇಳದ ಮಾತನ್ನು ಕಾಣದ ಮೌನದಲಿ 
ಹುಡುಕುವ ನಾವಿಬ್ಬರು ಜೊತೆಜೊತೆಯಲಿ . . .

Friday, 6 April 2018

SAMSAARA

              'ಸಂಸಾರ 'ವು

ಸಪ್ತಸ್ವರಗಳ ಜೊತೆ  ಸಪ್ತಪದಿ ತುಳಿದು 
ಸಪ್ತವರ್ಣಗಳ ಜೊತೆ ಭಾವಗಳ ತಿಳಿದು 
ಆಪ್ತಕರಗಳ ಜೊತೆ ಬಂಧ ವನು ಬೆಸೆದು 
ಸೂಕ್ತಸಲಹೆಗಳ ಜೊತೆ  ಸಾಗುವುದು ....

NANNOLAVE

                ನನ್ನೊಲವೆ        

        ನನ್ನೊಲವೆ ನಿನ್ನೊಲವ ನೀಡು 
        ನನ್ನೊಳಗೆ ನಿನ್ನೊಲವ ತೀಡು 
        ನನ್ನೊಳಗೆ ನನ್ನನ್ನೇ ಕಾಡು 
        ನನ್ನೊಳಗೆ ನಿಂದೇನೇ ಹಾಡು .

Wednesday, 4 April 2018

HAREYA

                                           ಹರೆಯ 
ಈಗಷ್ಟೆ  ಶುರುವಾಗಿದೆ ನನ್ನ ಕನಸಿಗೆ ಆವೇಗ ,
ಕನಸಲ್ಲೂ ಕನವರಿಸುತಿದೆ ನನ್ನ ಮನಸು ಈಗೀಗ ,

 ಬೀಸುವ ತಂಗಾಳಿಯು ಕೂಡ ದಾರಿ ಬೇಡುತಿರುವಂತೆ ಭಾಸವಾಗಿದೆ ,
ಹಾರುವ ಹಕ್ಕಿಗಳ ಚಿಲಿಪಿಲಿ ನಾದವು ನನ್ನ ಹಾಡಿಗೆ ಪ್ರಾಸವಾಗಿದೆ,
ಏನೇನೋ ಹೊಸದಾಗಿ ಕಾಣುತಿವೆ ಈಗ ಎಲ್ಲವೂ ; ಆಗ್ಗಾಗ್ಗೆ ಬದಲಾಗುತಿವೆ ಏಕೆ ನನ್ನ ಕನಸುಗಳು . 

ಸರಿಯಾಗಿ ಸರಿಗಮಪದನಿಸ ನನಗೆ ಬಾರದು ; ಸರಿಸುಮಾರು ದೂರ ನಡೆದರೂ ಯಾಕೋ ದಾರಿಯೇ ಸಾಗದು .

ಆಡಾಡುತ್ತಿರುವಂತೆ ಹಾಡು ಮೂಡಿದೆ ನೋಡೀಗ,
ನಾನೇಕೆ ಹೀಗಾಗೋದೇ ಬೇಗ ಹೇಳಿ ನೀವೀಗ .

MALE HESARU

                      ಮಳೆಯ ಹೆಸರು
ಮಳೆ ಬಂತೊಡೆ ಬಿಸಿಲಲಿ ಬಿಸಿಲುಮಳೆಯೆಂಬರು,
ಮಳೆ ಬಂತೊಡೆ ಮಳೆಗಾಲದಾದಿಯಲಿ ಮುಂಗಾರುಮಳೆಯೆಂಬರು ,
ಮಳೆ ನಿಂತು ಮತ್ತೆ ಹುಯ್ದೊಡೆಯಲಿ ಹಿಂಗಾರುಮಳೆಯೆಂಬರು ,
ಮಳೆನೀರಿಗಿದಾರರಿವಾದೊಡೆ .... 
ಮಳೆಹನಿಗಳ ಫೈಪೋಟಿ ತಡೆವವರಾರಯ್ಯ?

Tuesday, 3 April 2018

AASE

                      ಆಸೆ 
ನಿನ್ನ  ಆ ಚೆಂದದ ಭಾವನೆಗಳ ಮಡಿಲಲಿ ,
ಅಂದದ ಆನಂದದ ನಂದದ ನಗುವಿನಲಿ ,
ಚೆಂದದ ಗಂಧದ ಸುಗಂಧದ ಪರಿಮಳದಲ್ಲಿ ,
ಮುಂಜಾನೆಯಲಿ ತಿಂಗಳ ಬೆಳಕನ್ನರಸುವ , ಮುಸ್ಸಂಜೆಯಲಿ ನೇಸರನನ್ನುಡುಕುವ , ಮಳೆಯಲ್ಲಿ ನಕ್ಷತ್ರಗಳನ್ನೆಣಿಸುವ ಆಸೆ . . .

Monday, 2 April 2018

DIARY

                      ದಿನಚರಿ 
ನೆನಪಿನ  ದಿನಚರಿಯಲಿ ಖಾಲಿ ಪುಟಗಳದೇ ಕಾರುಬಾರು ,
ಕನಸಿನ  ಕನವರಿಕೆಯಲಿ  ಹೋಳಿ ನೆನಪುಗಳು ಒಂಚೂರು ,
ದಿನಚರಿಯಲಿ ಕನವರಿಕೆಯನೇ  ಬರೆಯಲೇ ?
ಖಾಲಿ ಪುಟಗಳನು  ಕನಸಿನ  ವಿಳಾಸಕ್ಕೆ ಕಳಿಸಲೇ ?
ಪುಟಗಳ ನೆನೆಸುತ್ತಿವೆ ನೆನಪಿನ  ತುಂತುರು ,ನೆನೆವ ಮೊದಲೇ ಬಂದು ನೆನಪಿಸು ಒಂಚೂರು...

KAREVE

                      ಕರೆ 
ಕರೆದರೆ ಬರರು ಎಂದು  ತಿಳಿದಿದ್ದರೂ ಕರೆವೆ !
ಕರೆಯಬಾರದೇಕೆ ? ಎಂಬ  ಮನದ  ಬಯಕೆ ಪೂರ್ಣಗೊಳಿಸಲು ,
ಮಾತಾಡಲು ಕಾದಿರುವ ನಾಲಿಗೆಯ ಆಸೆ ತೀರಿಸಲು ,
ಮನದ  ಮಾತುಗಳಿಗೆ  ವಿರಾಮ  ನೀಡಲು ,
ಕರೆದರೂ  ಬರರು ಎಂದು  ತಿಳಿದಿದ್ದರೂ ಕರೆವೆ !

yake?

                         ಏಕೆ ?
ನಿನ್ನ  ಹೆಸರ  ಬರೆಯಲು ಮಿಡಿವುದು  ಹೃದಯ ,
ನಿನ್ನ  ಹೆಸರ  ಕರೆಯಲು  ತುಡಿವುದು  ಹರೆಯ ,
ನಿನ್ನ  ನಡುವೆ  ಸುಳಿಯಲು  ಬಯಸಲು  ಮನವು ,
ನಿನ್ನ  ನೆನಪ   ಎಣಿಸುತ  ಕುಳಿತಿದೆ  ಬೆರಳು .

Thursday, 29 March 2018

DIVISION

                   ಭಾಗಾಕಾರ 
Zero divided by anything is zero,
Anything divided by zero is Infinity.
Divide your sadness by Infinity,
divide your happiness by Zero.

GITTI[Dear]

                         ಗಿತ್ತಿ 
ನನ್ನಾತ್ಮಕತೆಗೆ  ಮುನ್ನುಡಿಯ ಬರೆದು ಕೊಡುವೆಯ ,
ನನ್ನಾತ್ಮದಂತರಂಗದ  ಕನ್ನಡಿಯ ಒರೆಸಿ ಕೊಡುವೆಯ,
ಪುಣ್ಯಾತ್ಮನಾಗುವೆನು ನಾ ಒಮ್ಮೆ ನನ್ನ  ಕರೆವೆಯ ,
ಪುಣ್ಯಾತಗಿತ್ತಿ ಸ್ವಲ್ಪ  ನನ್ನ  ಬಳಿ  ಬರುವೆಯಾ .

MADHYARAATRI

               ನಿದ್ರೆ  ಬರದ  ರಾತ್ರಿ 
ಕನಸುಗಳೇಕೋ ಮನಸಿಗೆ ನಿದ್ರೆ ಮಾಡಲು ಹೇಳುತ್ತಿಲ್ಲ , ಕಣ್ಣುಗಳೇಕೋ ಕನಸ  ಕಾಣಲು ಮನಸ   ಮಾಡುತ್ತಿಲ್ಲ . 
ರಾತ್ರಿ ಹನ್ನೊಂದೂವರೆಯಾದರೂ ಇನ್ನೊಂದುವರೆ  ಗಂಟೆ ಎದ್ದಿರು ಎಂದಿದೆ ಮನಸು.  ಆಕಳಿಕೆಗಳ ಆಗಮನಕ್ಕೆ ಕಾಯುತ್ತಿದೆ ಬಾಯಿ , ಆಕಳುಗಳೂ ಮಲಗಿವೆ ನಾಯಿ ಜೋಗುಳ ಕೇಳಿ . ಚಾರ್ಜರ್   ಬಳಲಿ ಬೆಂಡಾಗಿದೆ ಮೊಬೈಲಿಗೆ ಜೀವ ಕೊಟ್ಟು , ಮೊಬೈಲ್  ಕೂಡ ಚಿಂತೆಗೀಡಾಗಿದೆ ಗೊತ್ತಾಗದೆ ನಾಳಿನ  ದಿನಾಂಕದ  ಗುಟ್ಟು . ಡೈನಿಂಗ್  ಟೇಬಲ್  ಸುಸ್ತಾಗಿದೆ ಚೊಂಬಲ್ಲಿರುವ  ನೀರನ್ನು ಹೊತ್ತು , ಗೂಡೆಗಳೂ ಬೈಯುತ್ತಿವೆ ನೋಡುತ್ತಾ ಹೊತ್ತು . ಸಂಜೆ ಹಚ್ಚಿದ  ದೀಪ  "ಇನ್ನೂ  ಬಿಡುವು ಕೊಟ್ಟಿಲ್ಲ ನನಗೆ " ಎಂದು ಬೈಯುತಿದೆ , ಫ್ಯಾನಿನ ಗಾಳಿಯು ತಂಪಾಗಿ ಬೀಸುತ್ತ ದೀಪ ಮತ್ತು ಗೋಡೆಗೆ ಸಮಾಧಾನ  ಮಾಡುತ್ತಿದೆ . ಹೊರಗೆ ಕುಳಿತ ಬೆಕ್ಕು ದೀಪ  ಆರುವುದಾ ಕಾಯುತ್ತಾ ನಿದ್ರೆ ಹೋಗಿದೆ , ಇನ್ನೆಷ್ಟು  ಕಾಲ ಸಮಯವಿದೆ  ಅಲಾರಾಂ ಗೆ ಎಂದು ಗಡಿಯಾರ  ಲೆಕ್ಕ ಹಾಕುತ್ತಿದೆ , ಬರೆಯುತ್ತಿರುವ  ಪೆನ್ನಿನ  ಕಡ್ಡಿಗೂ  ನಿದ್ರೆ ಬಂದಂತಿದೆ . ನನ್ನಪ್ಪನ  ಗೊರಕೆಯೊಂದಿಗೆ ಸಾಗುತ್ತಿವೆ ನಾಳಿನ  ಕನಸುಗಳು ,ನಾಳಿನ  ಕರೆಯೋಲೆಯಲ್ಲಿ ಇದೆ ತಿಂದ ಬೋಂಡದ  ಕರೆಗಳು . ದೇವರ ಮನೆಯಲ್ಲಿನ  ದೇವರುಗಳೇಕೋ ಇನ್ನು ಕಣ್ಣು ಮುಚ್ಚಿಲ್ಲ , ನನ್ನಮ್ಮನ  ಬಿಸಿ ಉಸಿರಿನ  ಶಾಖಕ್ಕೆ ಬೆಳಗಿನ  ಉಪಹಾರ  ತಯಾರಾಗುತ್ತಿದೆಯಲ್ಲ . ಶಿವರಾತ್ರಿಯ ದಿನ  ರಾತ್ರಿ ಎಂಟೂವರೆಗಂಟೆಗೇ ಬರುವ  ನಿದ್ರೆ ಹೀಗೇಕೆ ಕಾಡುತಿದೆಯಲ್ಲ . ಬರೆವ  ಹಾಳೆಯೂ ಕೂಡ ದಯವಿಟ್ಟು ಕ್ಷಮಿಸಬೇಕು . ಉರಿವ  ಸೂರ್ಯನು  ಉತ್ತರಾರ್ಧದಲ್ಲಿ ಉರಿಯುತಿದ್ದಾನೆ , ಚಂದ್ರನೇನೋ  ನಕ್ಷತ್ರಗಳ ನಡುವೆ ಮೋಡಗಳ ಜೊತೆ ಆಟವಾಡುತಿದ್ದಾನೆ . ಬೆಳಿಗ್ಗೆ ಐರನ್   ಮಾಡಿ ಮಡಗಿದ್ದ  ಐರನ್ ಬಾಕ್ಸ್  ಚಳಿಯಿಂದ  ನಡುಗುತ್ತಿದೆ . ಫ್ಯಾನಿನ  ಗಾಳಿಗೆ  ಅಲ್ಲಾಡುತ್ತ ಪ್ಲಾಸ್ಟಿಕ್  ಕವರ್   ಸಪ್ತಸ್ವರದ  ವೀಣೆಯ ಶಬ್ದದಂತೆ ಸದ್ದು  ಮಾಡುತ್ತಿರಲು ನನಗೆ  ನಿದ್ದೆ ಬಂತು . . . .

Wednesday, 28 March 2018

MELLAGE

                                               ಮೆಲ್ಲಗೆ
ಮತ್ತೆ ಮತ್ತೆ ನಿನ್ನೇ ನೋಡೋ ಆಸೆ ಬಂತು ನನಗೆ 
ನಾ ಮತ್ತೆ ಮತ್ತೆ ನೋಡುವಾಗ ನೀನಿದ್ಬಿಡು ಸುಮ್ಮಗೆ ,
ಯಾವ  ಹೂವು ಮುಡಿಸಲಿ ನಿನಗೆ ನನ್ನ ಮಲ್ಲಿಗೆ 
ಸ್ವಲ್ಪ ದಯಮಾಡಿ ಹತ್ತಿರ ಬಂದು ಹೇಳು ನೀ ಮೆಲ್ಲಗೆ .


   

KSHAMISU

                      ಕ್ಷಮಿಸು 
ಸಾಗರದ ಅಲೆಯ ಜೊತೆಗೆ ; ಸಾಗಿದೆ ನಾ ನಿನ್ನ  ಕಡೆಗೆ ,
 ಸಾವಿರದ  ನೂರಾರು  ಪದಕೆ ;ನೀ ಬರುವ ದಾರಿಯ ಬಯಕೆ ,
ಸಾಗರಿಯೇ ನಿನ್ನ ಕಾಣಲು ; ಹಾತೊರಿವೆ ನಿನ್ನ  ಸೇರಲು ,
ಹೇ ಒಲವೇ ಹೇಳು ಪ್ರೀತಿಯ ; ನಾನರಿಯೆ ನಿನ್ನಾ ರೀತಿಯ ,
ಮುನಿಸು ತರವೆ ನಿನಗೆ ಪ್ರೇಯಸಿ ; ಕ್ಷಮಿಸಿ ಉಳಿಸು ನನ್ನ  ರೂಪಸಿ .

ADHYA

                      ಮಗು
ಅಂಬೆಗಾಲಲಿ ಕೂತು ಯಾರ ನೋಡುತಿರುವೆ ,
ಕೈಯ ನೆಲಕೆ ಊರಿ ಏನ  ಮಾಡುತ್ತಿರುವೆ ,
ಬಾ ಇಲ್ಲಿ ,ಇಲ್ಲಿ ಬಾ ಇಲ್ಲಿ 
ನಾನಿಲ್ಲೇ ಇರುವೆನು ಬಾ ಇಲ್ಲಿ . 

ನಿನ್ನ  ನಗುವ  ಕಂಡು ಮಗುವಾದೆ ನಾನು ,
ನಿನ್ನ  ಮೊಗವ  ಕಂಡು ನಗುಬಾರದಿರದೇನು ,
ಬಾ ಇಲ್ಲಿ ,ಇಲ್ಲಿ ಬಾ ಇಲ್ಲಿ 
ನಾನಿಲ್ಲೇ ಇರುವೆನು ಬಾ ಇಲ್ಲಿ . 

ನಿನ್ನ  ಮಾತು ಏನೋ ನನಗೆ ತಿಳಿಯದು ,
ನನ್ನ  ಮಾತು ಹೇಗೆ  ನಿನಗೆ ತಿಳಿವುದು ,

ಬಾ ಇಲ್ಲಿ ,ಇಲ್ಲಿ ಬಾ ಇಲ್ಲಿ 
ನಿನ್ನ ಭಾಷೆ ಕಲಿಸು ಬಾ ನನಗೀಗಾಲೇ ಇಲ್ಲಿ .


NEELI

                     ನೀಲಿ
ಆಕಾಶ ನೀಲಿ , ಸಾಗರವೂ ನೀಲಿ . 
ನಾಳೆಯ ನೆನಪಲಿ ನೀನಿರುವೆ , ತಿಳಿಯಾಗದ ನೀಲಿಯಂತೆ ; ಮರೆಯಾಗದ  ಅಲೆಗಳಂತೆ .

Tuesday, 27 March 2018

MUGINAABHARANA

                      ಮೂಗುತಿ             
ಗೆಳತಿ ಗೆಳತೀ ನೀ ಬಾಳ ಬೆಳಗುತಿ ,
ನಿನ್ನಾ ಹೊಳೆವ ಮೂಗುತಿ ; ಅದರಲ್ಲೇ ತುಂಬಿದೆ ನನ್ನ ಬಾಳಬುತ್ತಿ , ಎಂದು ತಿಳಿದ ನೀ ಬಾಳಾ ಬೀಗುತಿ .

Monday, 26 March 2018

PARICHAYA

                      ಪರಿಚಯ
ವಾಲಾಡುತಿದೆ  ಸೇವಂತಿ ಹೂವಿನಂತೆ ನಿನ್ನ ಜುಮುಕಿ , 
ಮಾತಾಡುವಾಸೆ ಒಮ್ಮೆ ಅದ  ಕೆಣಕಿ. 
ಹಾರಾಡುತಿರುವಾಗ  ನವಿಲ ಗರಿಯಂತೆ ನಿನ್ನ  ಮುಂಗುರುಳು ,
ಸರಿಮಾಡುವಾಸೆ ತೋರುತಿದೆ ನನ್ನ  ಕೈಬೆರಳು . 
ಮುಂಗುರುಳ ಪರಿಚಯ ಮಾಡಿಸು ನನ್ನ ಕೈಬೆರಳಿಗೆ ,
ನಾ ಕೊನೆವರೆಗು ಜೊತೆಯಾಗಿರುವೆ ನಿನ್ನ ನೆರಳಿಗೆ.

Saturday, 24 March 2018

NENEVE

                       ನೆನೆವೆ 
ಮರೆತು ಮರೆತು ನೆನೆಯುತಿರುವೆ ,
ನೆನೆದು ನೆನೆದು ಮರೆತಿರುವೆ ,
ಮರೆತರೂ ಮರೆಯಾಗದ ; ನೆನೆದರೂ ಕೊನೆಯಾಗದ,  ನಿನ್ನ  ನೆನಪ  ನೆನಯಲೆ ಅಥವಾ ಮರೆಯಲೇ ?

INFINITY

                          ಅನಂತ
ಮುಂಗುರುಳ  ಸರಿಸಿ ಮರೆಸಿದೆ ಮಾತನು ,
ಕಣ್ಸನ್ನೆಯ ಸೂಚಿಸಿ ಮೆರೆಸಿದೆ ಮೌನವ ;
ನಾನೀಗ ಮಾತು ಮರೆತು ಕೂತಿಹೆನು ,
ಬಾ ಬೇಗ ಮೌನ ಮರೆಸು ನೀನೀಗ ,ನಾ ಕಾಯುತಿರುವೆನು ನಾ ಕಾಯುತಿರುವೆನು ,.....∞

MATHEMATICS

                                                       ಗಣಿತ 
ನೀ ನಕ್ಕಾಗ ಮೂಡುವ  ಕೆನ್ ಗುಳಿಯ ಆಳವನ್ನಳೆಯಲು ಯಾವ ಸೂತ್ರ ಉಪಯೋಗಿಸಲಿ ?
ನಿನ್ನ ಕಣ್ರೆಪ್ಪೆಯ ನಾಜೂಕನ್ನು ತಿಳಿಯಲು ಯಾರ ಸಿದ್ಧಾಂತ ಅನುಸರಿಸಲಿ ? 
ನಿನ್ನ  ಮುಗುಳ್ನಗೆಯ ಮಾಯೆಯನ್ನರಿಯಲು ಯಾವ ಪ್ರಮೇಯ ಬಳಸಲಿ ?
ನೀಗಾಣದಾಗ ಕಂಗಾಲಾಗುವ ಕಣ್ಗಳಿಗುತ್ತರಿಸಲು ಯಾರ ಸಹಾಯ ಬೇಡಲಿ ?
ಸುಳಿವು ಕೊಡುವೆಯ ಚೆಲುವೆ ದಯಮಾಡಿ ನಿನ್ನ  ಕಣ್ಣಲ್ಲಿ . . !

Anvartha

                       ಅನ್ವರ್ಥ 
ನಿನ್ನಾ ನೋಟದಲೇ ಕಾಣುವೆ ನಾ ೧೦೮ ಅರ್ಥ 
ನಿನ್ನಾ ಮುಗುಳ್ನಗೆಯಲ್ಲೇ ತುಂಬಿದೆ ೧೦೬ ಅರ್ಥ 
ನಿನ್ನ ೧೦೦೬ ಕನಸುಗಳಲಿ ನೀಡು ನನಗೊಂದರ್ಥ 
ನನ್ನ ಅರ್ಥವಾಗದ ಮನಸಿಗೆ ತಿಳಿಸು ೦೧ ಪ್ರೇಮದರ್ಥ

NEENE HELU

                      ಹೇಳುನೀ...!
ಮುಗುಳುನಗೆಯೊಂದಿಗೆ ಕಿರುನಗು ಬೆರೆತು 
ಮೊಗಸಿರಿಯ ನಗೆಗೆ ನನ್ನೇ ನಾ ಮರೆತು 
ಮನದಲಿ ಮೂಡಿದ ಕಣ್ಣಲ್ಲುಡುಕುವೇ ನಿನ್ನನ್ನೇ ಮೊದಲು 
ನನ್ನುಸಿರಿನ ದನಿಯು ಅರ್ಥವಾದಮೇಲೆ ನಿನ್ನಲ್ಲೇಕೀ ತೊದಲು

PISUMAATU

                                               ಪಿಸುಮಾ... ತು
ಬಳಿಕರೆದು ಬರಸೆಳೆದು ಹೇಳು ನೀ ಪಿಸುಮಾತು 
ಅರ್ಥವಾಗದಿದ್ದರೂ ಆಲಿಸುವೆ ನಿನ್ನ ಪ್ರತಿಮಾತು 
ಸಮಯದ ಮಿತಿಯುಂಟೆ ಪ್ರೀತಿಯ ಆಲೋಚನೆಗೆ 
ಸಮಯ ಕೊಡಬಾರದೇ ಸ್ನೇಹದ ಸಮಾಲೋಚನೆಗೆ

KADATA[File]

                              ಕಡತ
ಬರುತಿದೆ ನಿನ್ನ ನೆನಪು ನಿಂತು ನಿಂತು ಬರುವ ಮಳೆಯಂತೆ ,
ಸೂರ್ಯನ  ಹೊಂಗಿರಣಗಳಿಗೆ ಮಂಜು ಮರೆಯಾಗುತ್ತಿರುವಂತೆ ,
ಹೂ ನಗುವಿನ ನೆನಪು ನೋವ ಮರೆಸುತ್ತಿರುವಂತೆ ಕನಸು ಬೀಳಲು , ನಿದ್ದೆಗಣ್ಣಲ್ಲೆದ್ದು ನಿನ್ನನ್ನೇ ಹುಡುಕುತ್ತಾ ನಿಂತೆ .

JOTHEGIRU

                                                    ಜೊತೆಗಿರು 
ಸೊಗಸಿಗೂ ಅಸೂಯೆಯಾಗುವ ಕನಸ ಭಿತ್ತಿ ಬೆಳೆಸಿರುವೆ ಏಕೆ ?
ನೆನಪಿಗೂ ನೆನಪಾಗದ ನೆನಪುಗಳ ಭಾರ ಹೊರೆಸಿರುವೆ ಏಕೆ ?
ಕನಸು ಸೊಗಸಾಗಲು  ಕಾರಣ ನೀನು 
ನೆನಪು ಭಾರವಾಗಲೂ  ಕಾರಣ ನೀನೆ 
ಕನಸಲ್ಲೇಕೆ ನೀ ಬರುವೆ , ನೆನಪಲ್ಲೇಕೆ ನೀನಿರುವೆ !
ಉತ್ತರ  ಬೇಕಿಲ್ಲ ಎನಗೆ , ಜೊತೆಗಿರು ನೀ ನನ್ನೊಳಗೇ ...

Friday, 23 March 2018

HANI

                             ಹನಿ
ಮಳೆಹನಿಗಳ ಜೊತೆ ಮಾತನಾಡಲು ಮರದೆಲೆಗಳು ಬಿಡುತ್ತಿಲ್ಲ ,
ಮನದಲೆಗಳ ಜೊತೆ ಮೌನವಾಗಿರಲು ಮನಸೇಕೋ ಮಾತು ಕೇಳುತಿಲ್ಲ ,
ಮಳೆಹನಿಗಳ ಜೊತೆ ಮನದಲೆಗಳು ಮಾತನಾಡುತ್ತಿರುವಾಗ,
ಮೌನವೆಂಬ ಪದಕೆ ಅರ್ಥ ಹುಡುಕಲು ಸಾಧ್ಯವೇ ನನಗೀಗ .

BHAVACHITRA

                                       ಭಾವಚಿತ್ರ 
   ಭಾವನೆಗಳ ಚಿತ್ರಣ ಮಾಡಲು ಹೊರಟಿರುವೆ 
         ಬಣ್ಣಗಳ ಸಾಲ ಕೊಡುವೆಯ 
   ಕನಸುಗಳ ಕೆತ್ತನೆ ಕೆಲಸ  ಬಾಕಿಯಿಟ್ಟಿರುವೆ 
          ನೆನಪಿನ  ಉಳಿಯ ನೀಡುವೆಯ 
ಕೈಚಾಚಿ ಬೇಡುತಿರುವೆ ನೀಡದಿರಬೇಡ 
ನಿನ್ನನ್ನೇ ಕಾಯುತಿರುವೆ ಬರದಿರಬೇಡ