ನಿದ್ರೆ ಬರದ ರಾತ್ರಿ
ಕನಸುಗಳೇಕೋ ಮನಸಿಗೆ ನಿದ್ರೆ ಮಾಡಲು ಹೇಳುತ್ತಿಲ್ಲ , ಕಣ್ಣುಗಳೇಕೋ ಕನಸ ಕಾಣಲು ಮನಸ ಮಾಡುತ್ತಿಲ್ಲ .
ರಾತ್ರಿ ಹನ್ನೊಂದೂವರೆಯಾದರೂ ಇನ್ನೊಂದುವರೆ ಗಂಟೆ ಎದ್ದಿರು ಎಂದಿದೆ ಮನಸು. ಆಕಳಿಕೆಗಳ ಆಗಮನಕ್ಕೆ ಕಾಯುತ್ತಿದೆ ಬಾಯಿ , ಆಕಳುಗಳೂ ಮಲಗಿವೆ ನಾಯಿ ಜೋಗುಳ ಕೇಳಿ . ಚಾರ್ಜರ್ ಬಳಲಿ ಬೆಂಡಾಗಿದೆ ಮೊಬೈಲಿಗೆ ಜೀವ ಕೊಟ್ಟು , ಮೊಬೈಲ್ ಕೂಡ ಚಿಂತೆಗೀಡಾಗಿದೆ ಗೊತ್ತಾಗದೆ ನಾಳಿನ ದಿನಾಂಕದ ಗುಟ್ಟು . ಡೈನಿಂಗ್ ಟೇಬಲ್ ಸುಸ್ತಾಗಿದೆ ಚೊಂಬಲ್ಲಿರುವ ನೀರನ್ನು ಹೊತ್ತು , ಗೂಡೆಗಳೂ ಬೈಯುತ್ತಿವೆ ನೋಡುತ್ತಾ ಹೊತ್ತು . ಸಂಜೆ ಹಚ್ಚಿದ ದೀಪ "ಇನ್ನೂ ಬಿಡುವು ಕೊಟ್ಟಿಲ್ಲ ನನಗೆ " ಎಂದು ಬೈಯುತಿದೆ , ಫ್ಯಾನಿನ ಗಾಳಿಯು ತಂಪಾಗಿ ಬೀಸುತ್ತ ದೀಪ ಮತ್ತು ಗೋಡೆಗೆ ಸಮಾಧಾನ ಮಾಡುತ್ತಿದೆ . ಹೊರಗೆ ಕುಳಿತ ಬೆಕ್ಕು ದೀಪ ಆರುವುದಾ ಕಾಯುತ್ತಾ ನಿದ್ರೆ ಹೋಗಿದೆ , ಇನ್ನೆಷ್ಟು ಕಾಲ ಸಮಯವಿದೆ ಅಲಾರಾಂ ಗೆ ಎಂದು ಗಡಿಯಾರ ಲೆಕ್ಕ ಹಾಕುತ್ತಿದೆ , ಬರೆಯುತ್ತಿರುವ ಪೆನ್ನಿನ ಕಡ್ಡಿಗೂ ನಿದ್ರೆ ಬಂದಂತಿದೆ . ನನ್ನಪ್ಪನ ಗೊರಕೆಯೊಂದಿಗೆ ಸಾಗುತ್ತಿವೆ ನಾಳಿನ ಕನಸುಗಳು ,ನಾಳಿನ ಕರೆಯೋಲೆಯಲ್ಲಿ ಇದೆ ತಿಂದ ಬೋಂಡದ ಕರೆಗಳು . ದೇವರ ಮನೆಯಲ್ಲಿನ ದೇವರುಗಳೇಕೋ ಇನ್ನು ಕಣ್ಣು ಮುಚ್ಚಿಲ್ಲ , ನನ್ನಮ್ಮನ ಬಿಸಿ ಉಸಿರಿನ ಶಾಖಕ್ಕೆ ಬೆಳಗಿನ ಉಪಹಾರ ತಯಾರಾಗುತ್ತಿದೆಯಲ್ಲ . ಶಿವರಾತ್ರಿಯ ದಿನ ರಾತ್ರಿ ಎಂಟೂವರೆಗಂಟೆಗೇ ಬರುವ ನಿದ್ರೆ ಹೀಗೇಕೆ ಕಾಡುತಿದೆಯಲ್ಲ . ಬರೆವ ಹಾಳೆಯೂ ಕೂಡ ದಯವಿಟ್ಟು ಕ್ಷಮಿಸಬೇಕು . ಉರಿವ ಸೂರ್ಯನು ಉತ್ತರಾರ್ಧದಲ್ಲಿ ಉರಿಯುತಿದ್ದಾನೆ , ಚಂದ್ರನೇನೋ ನಕ್ಷತ್ರಗಳ ನಡುವೆ ಮೋಡಗಳ ಜೊತೆ ಆಟವಾಡುತಿದ್ದಾನೆ . ಬೆಳಿಗ್ಗೆ ಐರನ್ ಮಾಡಿ ಮಡಗಿದ್ದ ಐರನ್ ಬಾಕ್ಸ್ ಚಳಿಯಿಂದ ನಡುಗುತ್ತಿದೆ . ಫ್ಯಾನಿನ ಗಾಳಿಗೆ ಅಲ್ಲಾಡುತ್ತ ಪ್ಲಾಸ್ಟಿಕ್ ಕವರ್ ಸಪ್ತಸ್ವರದ ವೀಣೆಯ ಶಬ್ದದಂತೆ ಸದ್ದು ಮಾಡುತ್ತಿರಲು ನನಗೆ ನಿದ್ದೆ ಬಂತು . . . .

No comments:
Post a Comment