Tuesday, 2 April 2019

!@#

ಗೊಂದಲದ ಗೂಡಾಗಿದೆ ಮನಸು : ಸೊರಗಿ ನೀರಾಗಿದೆ ಕನಸು 
ಮನಸ ಮುನಿಸ ಮನ್ನಿಸಬೇಕು ಕನಸು 
ಕನಸ ಸೊಗಸ ಬಣ್ಣಿಸಬಾರದೇಕೆ ಮನಸು 
ಮನಸ ಕನಸು , ಕನಸು ಕಾಣಲೆಂದು 
ಕನಸ ಮನಸು ರೆಪ್ಪೆಯ ಮುಚ್ಚುವುದೆಂದು ! 

Saturday, 16 March 2019

B.Ed @ VTC

ಕಳೆದದ್ದು ಕೇವಲ ಎರಡೇ ಎರಡು ವರುಷ ; ಕೂಡಿಟ್ಟಿದ್ದು ಸಾವಿರ " ಸಾವಿರದ " ನೆನಪುಗಳ ಹರುಷ . ಏನ್ ಕೂಡೋದು ಕಳೆಯೋದು ಅಂತ ಏನೇನೋ ಲೆಕ್ಕ ಮಾಡ್ತಿದೀನಿ ಅನ್ಕೊಂಡ್ರಾ Mathematics pedagogy ಅಲ್ವಾ ಸ್ವಲ್ಪ adjust ಮಾಡ್ಕೊಳಿ .
ಬಿ.ಎಡ್ ಬಗ್ಗೆ ಬರೆಯಲು ಕೂರುವ ಮುನ್ನ , ಮನಸ್ಸನ್ನು ಗಟ್ಟಿ ಮಾಡ್ಕೊಂಡು ಕುಳಿತ್ಕೊಳ್ಬೇಕು ಏಕೆಂದರೆ ಮಧ್ಯದಲ್ಲಿ ಎಲ್ಲಾದರೂ ಭಾವುಕನಾದರೆ ಮುಂದುಳಿದ ಸುಂದರ ನೆನಪುಗಳಿಗೆ ಮೋಸ ಮಾಡಿದಂತಾಗುತ್ತದೆ .
"  correct ಆಗ್ ಚೇಂಜ್ ಇದೆ ಅಂದ್ರೆ ಬನ್ನಿ , ಚೇಂಜ್ ಇಲ್ಲ ಅಂದ್ರೆ ನಾನ್ ಫೀಸ್ ತಗೋಳೋದೆ ಇಲ್ಲ , ಹೋಗಿ ಚೇಂಜ್ ತಕೊಂಡ್ ಬರೋಗಿ " ಈ ಪದಗಳು ಎಲ್ರು ಕೇಳೇ ಇರ್ತೇರ ಅಲ್ವ ? ಯಾರ್ ವರ್ಡ್ಸ್ ಅವೆಲ್ಲ ಹೇಳಿ ನೋಡೋಣ ? ಹೌದು ಅವರು ಆಶಾ ಮೇಡಂ ನಮ್ಮ ವಿಜಯ ಟೀಚರ್ಸ್ ಕಾಲೇಜ್ ನ ಸ್ಟಾಫ್ .
ಯಾವಾಗೋ ಅಪ್ಲಿಕೇಶನ್ ಹಾಕಿ "ಮೇಡಂ classes ಯಾವತ್ತಿನಿಂದ ಸ್ಟಾರ್ಟ್ ಆಗುತ್ತೆ " ಅಂತ ಕಾಲ್ ಮಾಡಿದಾಗಲ್ಲೆಲ್ಲ ಅವರೇ answer ಮಾಡ್ತಿದ್ದು ಅನ್ನೋ ಆನ್ಸರ್ ನನಗೆ ಮೊನ್ನೆ ಗೊತ್ತಾಯಿತು .
ಅಂತೂ ಇಂತೂ 17 April 2017 ಬಹುಷಃ ಭುಧವಾರ ಇರ್ಬೇಕೇನೋ ಅವತ್ ಸ್ಟಾರ್ಟ್ ಅಯ್ತು ನೋಡಿ" vtc ದೋಣಿಯಲಿ ನಮ್ಮ ಪಯಣ" , ಸತತ ೨ ವರ್ಷಗಳ ಪಯಣದಲಿ, ಹಲವಾರು ಅಂಬಿಗರ ಶ್ರಮದಿಂದ, ನಾವಿಂದು ದಡ ಸೇರಿದ್ದೇವೆಂದರೆ ತಪ್ಪಾಗಲಾರದು .
ಏನ್ ಅದು ಸನ್ನಿವೇಶ ಅಬ್ಭಾ ಈಗ ನೆನೆಸಿಕೊಂಡರು ಮೈ ಜುಮ್ ಎನ್ನುತ್ತದೆ, ಪ್ರಾಕ್ಟಿಕಲ್ ಎಕ್ಸಾಮ್ಸ್ ಅನ್ನೋ ಆ ಟೈಮ್  ಅಬ್ಬಬ್ಬಾ  .....
"ಸರ್ ಸರ್ ತುಂಬಾ ಮುಂದೆ ಹೋಗ್ಬಿಟ್ರಿ "
"ಹೌದ ! ನಾನ್ ಎಲ್ಲಿದ್ದೆ ?"
" ಆಗ್ಲೇ ನೀವ್ ೪ನೇ ಸೆಮ್ ಎಂಟ್ರಿಲ್ ಇದ್ರಿ "
" ಸರಿ ಇರ್ಲಿ ಬಿಡಿ "
"ಸರ್ ಇನ್ನೂ ಮೊದಲನೇ ಸೆಮ್ ಕೂಡ ಸ್ಟಾರ್ಟ್ ಆಗ್ಲಿಲ್ಲ "
"ಸಾರೀ , ಸಾರೀ ನಾನ್ ಇನ್ನೂ ಆ ಗುಂಗಲ್ಲೇ ಇದ್ದೆ "
ಕಂಟಿನ್ಯೂ ಮಾಡ್ಲಾ ? ಹಹಹ ಕೆಜಿಎಫ್ ಸಿನಿಮಾ ನೋಡಿದವರಿಗೆ ಮೇಲಿನ conversations ಅರ್ಥ ಆಗುತ್ತೆ ಅಂದುಕೊಳ್ಳಬಹುದಾ ?
ಮೊದಲನೇ  ಸೆಮಿಸ್ಟರ್ , ಎಲ್ಲಾ ಹೊಸದು , ಎಲ್ಲರೂ ಹೊಸಬರು . ಒಬ್ಬರಿಗೊಬ್ಬರ ಪರಿಚಯ ಆಗುವುದರೊಳಗೆ  ಸಮಯ  ಕಳೆಯುತಿರಲು , ನಾವ್ ಎಂದೂ  ಓದಿರದ ವಿಷಯಗಳ ಪರಿಚಯವೂ ನೆಡೆಯುತಿತ್ತು . ಜೊತೆಜೊತೆಗೇ  ಪ್ರಾಧ್ಯಾಪಕರ ಬಳಿ ಕೇಳದಂತಹ ಪ್ರಶ್ನೆಗಳಾದ "ಬಿ.ಎಡ್ ತುಂಬಾ ಕಷ್ಟನ ? ಇಲ್ಲಿ ಟೀಚರ್ಸ್ ಎಲ್ಲಾ ಹೇಗೆ ? ಅವ್ರ್ ಹೇಗೆ , ಈ ಟೀಚರ್ ತುಂಬಾ ಸ್ಟ್ರಿಕ್ಟ್ ಆ ? "ಮುಂತಾದ ಪ್ರಶ್ನೆಗಳ ಸರಮಾಲೆಗಳಿಗೆ ಸೀನಿಯರ್ಸ್ ಉತ್ತರಗಳು.
ಹೀಗೆ ಎಲ್ಲವು ನಡೆಯುತ್ತಿರುವಾಗ EPC ಆಕ್ಟಿವಿಟೀಸ್ ...! ಇದರ ಬಗ್ಗೆ ಹೇಳೋ ಹಾಗೆ ಇಲ್ಲ .
"ಯಾರ್ಯಾರಿಗೆ ಯೋಗ ಮ್ಯಾಟ್  ಬೇಕು  ಕೈ ಎತ್ತಿ : ನಿಮಗ್ ಬೇಡ್ವಾ ? ಮನೇಲೆ ಇದೆಯಾ ?.... " ಜಾಸ್ತಿ ಯೋಗ ಬಗ್ಗೆ ಮಾತಾಡೋದ್ ಬೇಡ ಕೈ ಕಾಲ್ ನೋವ್ ಬಂದ್ರೆ ಕಷ್ಟ .
"ಏನ್ ಪ್ರೇಯರ್ ಇಸ್ಟ್ ಉದ್ದ ಇದೆ , ನ್ಯೂಸ್ ಪೇಪರ್ ಬೇರೆ ಓದಬೇಕಾ , ಅಯ್ಯೋ ಏನಿದು ದಿನ ಧ್ಯಾನ ಮಾಡ್ಬೇಕಾ , ೧೦ ಗಂಟೆಗೆ ಕರೆಕ್ಟ್ ಆಗ್  ಇಲ್ಲಿರಬೇಕಾ , ೫ ಗಂಟೆ ವರೆವಿಗೂ ಇಲ್ಲೇ ಇರ್ಬೇಕಾ , ೩ ಗಂಟೆಗೆ ಬಿಟ್ರೆ ಆಗಲ್ವ , ೧೦ ತಿಂಗ್ಳು ಇತ್ತು ಆವಾಗ್ಲೇ ಸೇರ್ಕೋಬೇಕಿತ್ತು ...... ...." ಇವೆಲ್ಲ ನನ್ನೊಬನಿಗೆ ಅನ್ನಿಸಲಿಲ್ಲ ಎನ್ನುವುದು ನನ್ನ ಅನಿಸಿಕೆ , ಇದರ ಬಗ್ಗೆ ನಿಮ್ಮ ಅನಿಸಿಕೆ ? ನಂಗೂ ಹೀಗೆ ಅನ್ನಿಸ್ತು ಅಂದ್ರ , ಕೇಳಿಸ್ತು ಬಿಡಿ .
ಮತ್ತೆ ಇನ್ನೇನ್ ಸಮಾಚಾರ ? ಮುಂದೆ ನಿಮಗೆ ಗೊತ್ತಲ್ಲ ನೀವೇ ಬರ್ಕೊಳಿ ...
ಆದ್ರೂ ಎಲ್ಲಾ  ಹೇಳ್ಬೇಕು/ಬರೀಬೇಕು  ಅನ್ನಿಸ್ತಿದೆ ," ಎಲ್ಲಾ ಬರೆದು ಆದಮೇಲೆ ಯಾವ್  ಕಲರ್ ಫೈಲ್ ನಲ್  ಇಡ್ಲಿ ?" Submitted To ..... ? ಫೈಲ್ ಮೇಲೆ VIJAYA TEACHERS COLLEGE ಅಂತ ಬರೀಬೇಕಾ ? ನಮ್ದು ರಿಜಿಸ್ಟರ್ ನಂಬರ್ ಹಾಕ್ಬೇಕ or ರೋಲ್ ನಂಬರ್ ಹಾಕ್ಬೇಕ  ? ಸರ್ attendance ನಲ್ ನನ್ name ಇಲ್ಲ , initial ಬಿಟ್ಟೋಗಿದೆ ... ಹೀಗೆ ಅನ್ಕೊಂಡು ಒಂದೆರಡು functions ಮಾಡ್ಕೊಂಡು ಒಹ್ function ಅಂದ್ ಕೂಡ್ಲೆ
ನೆನಪಾಯಿತು "ಬೋರ್ಡ್ ಡೆಕೋರೇಷನ್ ಯಾರಿಗ್ ಚೆನ್ನಾಗ್ ಬರುತ್ತೆ ? ರಂಗೋಲಿ ಹಾಕ್ಬೇಕು , ಯಾರ್ ಹಾಕ್ತಿರಾ ?  welcome speech ಯಾರ್ ಮಾಡ್ತೀರಾ ? vote of thanks ? ಗೆಸ್ಟ್ introduction ಯಾರ್ ಮಾಡ್ತೀರಾ ? ಒಂದ್ ಭಕ್ತಿ ಗೀತೆ ಹಾಡಬೇಕು ? ಎಲ್ಲಾ ನಾಳೆ ಮದ್ಯಾನ principal ಮುಂದೆ rehearsal ಕೊಡ್ಬೇಕು ಚೆನ್ನಾಗ್ ಪ್ರಾಕ್ಟೀಸ್ ಮಾಡ್ಕೊಂಡ್ ಬನ್ನಿ ........ "
Engaging , explore , express , evaluation ಒಹ್ ನಾಲ್ಕೇ E ಇವೆ ಇನ್ನೊಂದ್ ಎಲ್ಹೋಯಿತು ನೀವೇ ಹುಡ್ಕೊಳಿ ." ಮ್ಯಾಮ್ ೫ ನಿಮಿಷದಲ್ಲಿ ಹೇಗ್ ಮಾಡೋಕ್ ಆಗುತ್ತೆ probing skill ನ ," ಗ್ರೂಪ್ ಗ್ರೂಪ್ ಆಕ್ಟಿವಿಟಿ ಗೆ ಯಾವ್  ಯಾವ್  ಆಕ್ಟಿವಿಟಿ ಮಾಡ್ಲಿ , ಕಂಪಲ್ಸರಿ ೨ ಆಕ್ಟಿವಿಟಿ ಇರ್ಲೇ ಬೇಕಾ ? ಒಂದ್ think pair and share ಇನ್ನೊಂದು learning  together ಮಾಡ್ಬಹುದಾ ?". " ಅಯ್ಯೋ ಎಲ್ಲಾ  ಮುಗಿತು ಅನ್ಕೊಂಡ್ರೆ ಎಲ್ಲಾನೂ ಸೇರಿಸಿ integrated skill ಬೇರೆ ಮಾಡ್ಬೇಕಾ ? ಜೊತೆಲ್ ICT ದು ಮಾಡಬೇಕಾ ? ಎರಡೂ pedagogy ಲೂ ಮಾಡ್ಬೇಕಾ ? " ಈ ವಾಕ್ಯಗಳನ್ನು ಕೇಳದೆ ಅಥವಾ ಹೇಳದೆ ಎರಡನೇ ಸೆಮ್ ಮುಗಿಯಲ್ಲ ಅನ್ಸುತ್ತೆ . ಇನ್ನೊಂದ್ ಮರೆತೋಗಿತ್ತು lesson plan ... "ಮಾಮ್ lesson plan ಇಲ್ದೆ ಪಾಠಾನೆ ಮಾಡೋಕ್ ಆಗಲ್ವ , lesson plan ಯಾಕ್ ಬೇಕು ? " ಈ ಪ್ರಶ್ನೆ ಇಂದ ಸ್ಟಾರ್ಟ್ ಆಗಿ , ಕೊನೆಗೆ ಲಾಸ್ಟ ಡೇಟ್ ಬಂದೇ ಬಿಡ್ತು ," ಸ್ವಲ್ಪ ಎಕ್ಸ್ಟೆಂಡ್ ಮಾಡುದ್ರೆ ಆಗಲ್ವಾ ಲಾಸ್ಟ ಡೇಟ್ ನಾ , ನಾವೇನ್ ಯಂತ್ರಗಳ ಆ.. ಎಷ್ಟು ಅಂತ ಬರಿಯೋದು , ಯಾರೂ ತಪ್ಪೇ ಮಾಡಲ್ವಾ , ಸ್ವಲ್ಪ ಮಿಸ್ಟೇಕ್ ಆದ್ರೂ ಹಂಗ್ ಅಂತಾರಲ್ಲ ,..... " ಅಂತೂ ಇಂತೂ ಏನಾಯಿತು ? ( ಮೂರೂ ಪುಟಗಳಿಗೆ ಮೀರದಂತೆ ಉತ್ತರಿಸಿ )
"ಕ್ಯಾಂಪ್ preparations ಹೇಗಿದೆ ? " ಅನ್ನೋದು  ಒಂದೇ ಒಂದು ಪ್ರಶ್ನೆನೇ ಆದ್ರೂ ಎಷ್ಟೊಂದ್ ಎಲ್ಲಾ recall ಅಗೋದೋ ಅಲ್ವಾ !
 " unit  plan ಬರ್ಕೊಡ್ಬೇಕಾ ? sir lesson plan book ಸಾಕಾಗುತ್ತಾ ? teaching points ಬರೀಬೇಕಾ or content analysis ಇಂದ ಬರೀಬೇಕಾ ? task  ..... ?????????"
ಹಂಗೂ ಹಿಂಗೂ ಎಲ್ಲಾ ಟೀಚರ್ಸ್ chamber ಹತ್ರ ಸುತ್ತಾಡಿ ಎಲ್ಲಾ ಅಧ್ಮೇಲು ಇನ್ನೊಂದ್  ಬಂತು
pupil activity :" ಸರ್ ಒಂದ್ class ಗೆ ಎಸ್ಟ್ ಟೀಚಿಂಗ್ ಪಾಯಿಂಟ್ಸ್ ಹಾಕ್ಬೇಕು ?"
teacher activity : " ನೀನ್ ಎಸ್ಟ್ ಹಾಕಿದೆಯ ?"
P A : " 6"
T A :"ಮಾಡೋಕ್ ಆಗುತ್ತಾ 40min class ನಲ್ಲಿ ?"
P A :"ಸಾರ್ ...... !!!!!"
  ಹೀಗೆ ಪ್ರಶ್ನೆಗಳ ಸರಮಾಲೆಯ ಉಡುಗೊರೆಗಳನ್ನು ನೀಡುತ್ತಾ ಸಾಗುತ್ತಿದ್ದಾಗ 'ಸ್ಕೂಲ್ಸ್ allotment notice' notice board ಮೇಲೆ ರಾರಾಜಿಸುತ್ತಿತ್ತು . " first ರೌಂಡ್ ಪ್ರೈಮರಿ ಗ ಹೈ ಸ್ಕೂಲ್ ಗ ? ಓಹ್ಹ್ಹ್ ಪ್ರೈಮರಿಗ , ಹಾಗಾದ್ರೆ PG ಆಗಿರೋರು ? puc ಗೆ ಟೀಚ್ ಮಾಡ್ಬೇಕಾ . . . ಸರಿ ಸರಿ  ".
"ಒಂದ್ pedagogy ಲಿ  minimum 6 observation {4 from subject teacher} compulsory . minimum 3 TLM's per class . ಯಾವ method teacher  ಬರುತ್ತಾರೋ ಆ method students ಗೆ first class allot ಮಾಡಿಸ್ಬೇಕು . ಲೀಡರ್ಸ್ ಯಾರ್ಯಾರು ಕೈ ಎತ್ತಿ , ನೀವೇ ಜವಾಬ್ದಾರಿ ತಗೋಬೇಕು , ಮತ್ತೆ ಇನ್ನೊಂದು observer ಇಲ್ದೆ class ಮಾಡೋ ಆಗಿಲ್ಲ " ಇನ್ನೂ  ಬೇಜಾನ್ ಇದೆ ಆದ್ರೂ ಇಸ್ಟ್ ಸಾಕು ಅನ್ಸುತ್ತೆ third sem ಮುಗಿಸೋಕೆ sorry very important part ನೇ ಮರ್ತಿದ್ದೆ " ಟ್ರಿಣ್ ಟ್ರಿಣ್ .... ಟ್ರಿಣ್ ಟ್ರಿಣ್ ... ಹಲೋ ಹೇಗಿತ್ತು ಕ್ಲಾಸ್ ? ಅವ್ರ್ ಹೇಗ್ ಮಾಡುದ್ರು ? observer ಯಾರ್ ಬಂದಿದ್ರು ? ಹೂ ಅವ್ರ ಅವ್ರ್ ಆಗಿತ್ತೇ ಪರವಾಗಿಲ್ಲ, ಇವ್ರ್ ಬಂದಿಲ್ಲ ಅಲ್ವಾ ಅದಕ್ಕೆ ಖುಷಿ ಪಡು ". ಇತ್ಯಾದಿಗಳು . . ಇತ್ಯಾದಿಗಳು ಅಂದ್ರೇನು ಅಂದ್ರ ಅದೇ . . . . . . . . "pre-test ,post -test  ಮುಗಿತಾ , action  research ಗ್ರಾಫ್ ಕರೆಕ್ಟ್ ಆಗ್ ಬಂದಿತ್ತಾ ? test ನಲ್ ಎಸ್ಟೆಸ್ಟ್ ಮಾರ್ಕ್ಸ್ ಸ್ಕೋರ್ ಮಾಡುದ್ರು ನಿಮ್  ಸ್ಟೂಡೆಂಟ್ಸ್ . ಅಂತೂ ಇಂತೂ ವಾರಕ್ಕೆ ಒಂದಿನ ಮಾತ್ರ ಜೂನಿಯರ್ಸ್ ಮುಖ ನೋಡ್ಕೊಂಡು , ವಾರಕ್ಕೊಂದಿನ prayer ಹಾಡ್ಕೊಂಡು , ಏನ್ ಮಾಡುದ್ವಿ ? third semester ಮುಗ್ಸುದ್ವಿ .

" ನಾನ್ ಗೋವಾ ಸೆಲೆಕ್ಟ್ ಮಾಡಿದೀನಿ , ನೀನು ಅದ್ನೇ ಮಾಡು . ಹೈದೆರಾಬಾದ್ ನೋಡಿಲ್ಲ ನಾನು ಅದ್ನೇ ಸೆಲೆಕ್ಟ್ ಮಾಡ್ತಿನಿ , ,ಇಬ್ರುಗೂ ಬೇಡ ಮಡಿಕೇರಿ ಸೆಲೆಕ್ಟ್ ಮಾಡು ". ಯಾವುದರ ಬಗ್ಗೆ ಹೇಳಲು ಹೊರಟಿರುವೆ ನಾನು ಎಂದು ಯಾರಾದರೂ ಊಹಿಸಬಲ್ಲಿರಾ ! ಯಸ್ ನಿಮ್ಮ ಊಹೆ ಸರಿಯಾಗಿದೆ !! ನೀವ್ ಯಾವ place ಸೆಲೆಕ್ಟ್ ಮಾಡಿದ್ರಿ ?
"place ಹಾಗಿರ್ಲಿ ಪ್ರಾಕ್ಟಿಕಲ್ ಎಕ್ಸಾಮ್ ಗೆ ಟಾಪಿಕ್ ಸೆಲೆಕ್ಟ್ ಆಯ್ತಾ ? ಯಾವ ಯಾವ ಸ್ಕೂಲ್ ? ಯಾವ್ ಸ್ಕೂಲ್ ನಲ್ ಯಾರ್ observer ಇರುತ್ತಾರೆ ? external observers ಗಿಂತ internal observers ಕಂಡ್ರೇನೇ ಭಯ ". " ಯಾರಿದ್ರೆ ನಂಗೇನು 20+20 lessonsನೇ ಮುಗ್ಸಿದಿನಿ ಇದ್ಯಾವ್ ಲೆಕ್ಕ " ಅನ್ಕೊಂಡ್ ಎಲ್ಲಾ ಮುಗಿತು .

ಹೊಸ ವರುಷ : scary house ಗಳು  , ಬೋಂಡಾ ಬಜ್ಜಿಗಳು  , snow city ಗಳು , ಜಡೆ ಕೋಲಾಟಗಳು  , ಅಂಗಡಿ ಮುಂಗಟ್ಟುಗಳು , ಮೆಹಂದಿಗಳು , ವಿಧವಿಧದ ರೊಟ್ಟಿಗಳು , ಚುರುಮುರಿಗಳು , ಎಳನೀರು-ಬಾಳೆಹಣ್ಣುಗಳು , ಮುದ್ದೆ ಊಟಗಳು , ತಕಧಿಮಿತಾ ನೃತ್ಯಗಳು , ಹೊಸ ಹೊಸ ಆಟಗಳು - ಬಗೆ ಬಗೆ ನೋಟಗಳು , ಮತ್ತು ಸ್ವೀಟುಗಳು .(ಪಂಚರಂಗಿ+ರಂಗಿತರಂಗ )
" guidance and counseling  ತಗೊಂಡಿರೋರು ಇಲ್ಲೇ ಇರಬೇಕಂತೆ , ಬೇರೆಯವರು ..... ".
"community activity ಗೆ topic ಏನ್ ತಗೋಳೋದು ", " ನಿಮ್ ಮೆಂಟರ್ ಯಾರು " , " ಈ ಮೂರ್ ದಿನದಲ್ಲಾದ್ರು RJ comlete ಮಾಡ್ಕೋಬೇಕು " , " ಸೆಮಿನಾರ್ ರಿಪೋರ್ಟ್ submit ಮಾಡುದ್ರಾ " , " ಸೌಂದರ್ಯ ಸ್ಕೂಲ್ ರಿಪೋರ್ಟ್ ನಾನ್ ಕೊಡಲ್ಲ ".
syllabus complete ಆಗೋಯಿತು , ಇಂಟರ್ನಲ್ ಟೆಸ್ಟ್ ಕೂಡ ಮುಗಿತು . ಇನೊಂದೆ ಒಂದ್ ಬಾಕಿ ಇತ್ತು ,ಅದುವೇ ಮೇನ್ ಎಕ್ಸಾಮ್  ಅದೂ ಕೂಡ ಇವತ್ತಿಗೆ ಫಿನಿಷ್ .
   ಇನ್ಮುಂದೆ . . . . . . .
              ಯಾಕ್  ಲೇಟ್ ? , uniform ಏನಾಯಿತು ? , id card ಎಲ್ಲಿ ? leave letter ಕೊಟ್ಟಿದ್ರ , in-shirt ಮಾಡೋಕ್ ಆಗಲ್ವ !,  ಗಲಾಟೆ ಮಾಡ್ಬೇಡಿ .
ಸರ್ 5 ಗಂಟೆ ಆಯಿತು attendance ಹಾಕಿ . shuttle ಆಡಬಹುದಾ ಮೇಡಂ ! .
       
                                                                         ಮುಂದುವರಿಯುವುದಿಲ್ಲ ....