ಮರಗಳ ಉಳಿಸೋಣ ಗಿಡಗಳ ಬೆಳೆಸೋಣ
ಮರಗಳ ಉಳಿಸೋಣ ಇನ್ನಾದರೂ ಗಿಡಗಳ ಬೆಳೆಸೋಣ ;; ಪ ;;
ಕಾಡೇ ನಾಡಿನ ಉಸಿರು ಮರೆಯದಿರಿ
ಪರಿಸರವನು ನೀವೆಂದೂ ಕಡೆಗಣಿಸದಿರಿ
ನಮಗೆಲ್ಲಾ ಆಹಾರ ಈ ಭೂಮಿಯಿಂದಲೇ
ಈ ಭುವಿಗೆ ಆಧಾರ ಮಳೆಯೊಂದೇ ಅಲ್ಲವೇ
ಆ ಮಳೆಗೆ ನೆರೆಹೊರೆಯೇ ಮರಗಿಡಗಳೇ ಅಲ್ಲವೇ
ಮರಗಳಿಲ್ಲದೆ ಮಳೆಯಿಲ್ಲ ; ಮರಗಳಿಲ್ಲದೆ ಭುವಿಯಿಲ್ಲ
ಮರಗಳಿಲ್ಲದೆ ನಾವಿಲ್ಲ ; ಮರಗಳಿಲ್ಲದೆ ಬದುಕಿಲ್ಲ.
ನಾವೆಲ್ಲಾ ಬದುಕಿಹೆವು ಈ ಗಾಳಿಯಿಂದಲೇ
ಈ ಗಾಳಿಗೆ ಆಧಾರ ಹಸಿರೆಲೆಗಳೇ ಅಲ್ಲವೇ
ಆ ಹಸಿರಿಗೆ , ನಮ್ಮ ಉಸಿರಿಗೆ ಆಧಾರ ಮರಗಿಡಗಳೇ ಅಲ್ಲವೇ
ಮರಗಳಿಲ್ಲದೆ ಉಸಿರಿಲ್ಲ ; ಮರಗಳಿಲ್ಲದೆ ಹಸಿರಿಲ್ಲ
ಮರಗಳಿಲ್ಲದೆ ನಾವಿಲ್ಲ ; ಮರಗಳಿಲ್ಲದೆ ಬದುಕಿಲ್ಲ.
ಕಾಡೇ ನಾಡಿನ ಉಸಿರು ಮರೆಯದಿರಿ
ಪರಿಸರವನು ನೀವೆಂದೂ ಕಡೆಗಣಿಸದಿರಿ
ಮರಗಳ ಉಳಿಸೋಣ ನಾವೆಲ್ಲರೂ ಗಿಡಗಳ ಬೆಳೆಸೋಣ